ಹೊಸ ದಿಗಂತ ವರದಿ ಮೈಸೂರು:
ಕೈ ಕಾಲು ತೊಳೆಯಲು ಹೋಗಿದ್ದ ಕಾಲುವೆಗೆ ಹೋಗಿದ್ದ ವಿದ್ಯಾರ್ಥಿಯೊಬ್ಬ ಕಾಲುಜಾರಿ ಬಿದ್ದು ನೀರು ಪಾಲಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಗೌರಿಘಟ್ಟ ರಸ್ತೆಯ ಕಾಲುವೆ ಬಳಿ ನಡೆದಿದೆ. ವೇಣುಗೋಪಾಲ(19) ನೀರು ಪಾಲಾದ ವಿದ್ಯಾರ್ಥಿ. ಪ್ರಥಮ ವರ್ಷದ ಬಿಎ ವಿದ್ಯಾರ್ಥಿಯಾಗಿದ್ದ ವೇಣುಗೋಪಾಲ್ ಕಾಲುವೆಯಲ್ಲಿ ಕೈಕಾಲು ತೊಳೆಯುಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದ. ಇದನ್ನು ನೋಡಿದವರು
ತಕ್ಷಣ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೇಣುಗೋಪಾಲ್ ಸಾವನ್ನಪ್ಪಿದ್ದಾನೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.