ಹೊಸದಿಗಂತ ವರದಿ, ವಿಜಯಪುರ:
ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ನಗರದ ಬೇಗಂ ತಾಲಾಬ್ ನಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ಹವೇಲಿ ನಿವಾಸಿ ಅನಿರುದ್ದ ಕಲ್ಯಾಣಕುಮಾರ ಸಾಮ್ರಾಣಿ (20) ಕೆರೆಯಲ್ಲಿ ನಾಪತ್ತೆಯಾದ ಯುವಕ.
ಕಾಲೇಜ್ ರಜೆ ಹಿನ್ನೆಲೆ ಅನಿರುದ್ದ ಸಾಮ್ರಾಣಿ, ತನ್ನ ಸಹೋದರ ಅನಿಕೇತ ಸಾಮ್ರಾಣಿ ಹಾಗೂ ಇನ್ನಿಬ್ಬರು ಗೆಳೆಯರೊಟ್ಟಿಗೆ ಬೇಗಂ ತಾಲಾಬ್ ಕಡೆ ಬಂದಿದ್ದಾನೆ. ಈ ವೇಳೆ ಬೇಗಂ ತಾಲಾಬ್ ನಲ್ಲಿ ಈಜಲು ಇಳಿದಿದ್ದಾನೆ.
ಗೆಳೆಯರು ಹಾಗೂ ಸಹೋದರ ಬೇಡ ಬೇಡ ಎಂದರು ನೀರಿಗೆ ಇಳಿದಿದ್ದು, ನೀರಲ್ಲಿ ನಾಪತ್ತೆಯಾಗಿದ್ದಾನೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ, ಬೋಟ್ ಮೂಲಕ ನೀರಿನಲ್ಲಿ ಅನಿರುದ್ದನಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.