Wednesday, September 28, 2022

Latest Posts

ಶಾಲೆಯ ಲಿಫ್ಟ್‌ನಲ್ಲಿ ಸಿಲುಕಿ ವಿದ್ಯಾರ್ಥಿಗಳೆದುರೇ ಮೃತಪಟ್ಟ ಶಿಕ್ಷಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಮುಂಬೈನಲ್ಲಿ ಶಾಲಾ ಕಟ್ಟಡದ ಲಿಫ್ಟ್‌ಗೆ ಸಿಲುಕಿ ಶಾಲಾ ಶಿಕ್ಷಕಿ ಮೃತಪಟ್ಟಿದ್ದಾರೆ.
ಮುಂಬೈನ ಸೆಂಟ್ ಮೇರಿ ಇಂಗ್ಲಿಷ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಜಿನಾಲ್ ಫರ್ನಾಂಡಿಸ್ ತರಗತಿ ಮುಗಿಸಿ ಆಫೀಸ್ ರೂಂಗೆ ತೆರಳುತ್ತಿದ್ದರು. ಈ ವೇಳೆ ಲಿಫ್ಟ್‌ಗೆ ಅವರು ಕಾಲಿಟ್ಟಿದ್ದಾರೆ, ಇದ್ದಕ್ಕಿದ್ದಂತೆಯೇ ಲಿಫ್ಟ್ ಚಲಿಸಿದ್ದು, ಅವರ ದೇಹ ಹೊರಗೇ ಉಳಿದಿತ್ತು. ತೀವ್ರ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಲಿಫ್ಟ್ ಆರಂಭವಾದ ಕೂಡಲೇ ಜಿನಾಲ್ ಸಹಾಯಕ್ಕಾಗಿ ಕೂಗಿದ್ದಾರೆ, ಸಹಾಯಕ್ಕೆ ಜನ ಬರುವ ಮುನ್ನವೇ ಲಿಫ್ಟ್ ಮೇಲೆ ಹೋಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!