‘A Thursday’ ಸಿನಿಮಾ ಟ್ರೇಲರ್ ರಿಲೀಸ್: ಇದನ್ನು ನೋಡಿದ್ರೆ ನಿದ್ದೆ ಬರೋದಿಲ್ಲ ಎಂದ ಯಾಮಿ ಗೌತಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಯಾಮಿ ಗೌತಮ್ ಅಭಿನಯದ ಎ ಥರ್ಸ್‌ಡೇ( A Thursday)  ಟ್ರೇಲರ್ ಇಂದು ಬಿಡುಗಡೆ ಆಗಿದೆ.
ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಅಭಿಮಾನಿಗಳು ಸಿನಿಮಾ ರಿಲೀಸ್ ತವಕದಲ್ಲಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಈ ರೀತಿ ಸಿನಿಮಾದಲ್ಲಿ ಯಾಮಿ ಇದೇ ಮೊದಲ ಬಾರಿ ನಟಿಸುತ್ತಿದ್ದಾರೆ.

ಟ್ರೇಲರ್ ರಿಲೀಸ್ ಮಾಡಿ, ಪ್ಲೇಸ್ಕೂಲ್ ಟೀಚರ್ ಒಂದು ದಿನದಲ್ಲಿ ಏನೆಲ್ಲಾ ಮಾಡೋಕೆ ಸಾಧ್ಯ? ಟ್ರೇಲರ್ ಎಲ್ಲರ ನಿದ್ದೆಗೆಡಿಸಲಿದೆ ಎಂದು ಯಾಮಿ ಹೇಳಿದ್ದಾರೆ. ಡಿಸ್ನಿ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಯಾಮಿ ಜತೆಗೆ ನೇಹ ಧೂಪಿಯಾ, ಡಿಂಪಲ್ ಕಪಾಡಿಯಾ, ಅತುಲ್ ಕುಲಕರ್ಣಿ ಹಾಗೂ ಮಾಯಾ ಸರಾಓ ನಟಿಸಿದ್ದಾರೆ. ಬೆಹ್‌ಝಾದ್ ಖಂಬಾಟಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!