Tuesday, August 9, 2022

Latest Posts

ಕುಂದಾಪುರದಲ್ಲಿ ಯುವ ಬ್ರಿಗೇಡ್ ಯಿಂದ ಪಂಜಿನ ಮೆರವಣಿಗೆ

ಹೊಸದಿಗಂತ ವರದಿ, ಕುಂದಾಪುರ:

ನಾವು ಕೊಟ್ಟ ಭಿಕ್ಷೆ ಜಾಸ್ತಿಯಾಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರ ಹಲ್ಲೆ, ಅತ್ಯಾಚಾರಗಳು ನಡೆಯುತ್ತಿದೆ ಎಂದು ಭಾಜಪ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ ಹೇಳಿದರು.
ಶನಿವಾರ ಯುವ ಬ್ರಿಗೇಡ್ ಕುಂದಾಪುರ ವತಿಯಿಂದ ನಡೆದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನವರಾತ್ರಿಯ ದುರ್ಗಾ ಪೂಜೆಯ ದಿನದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಹಿಂದು ಮಂದಿರಗಳನ್ನು ಧ್ವಂಸ ಮಾಡಿದ್ದಾರೆ. ಎಲ್ಲೆಲ್ಲಿ ಹಿಂದುಗಳ ಮನೆ ಇದೆಯೋ ಅಲ್ಲೆಲ್ಲಾ ಇಸ್ಲಾಂ ಜಿಹಾದಿಗಳು ಮನೆಗೆ ನುಗ್ಗಿ ಹಿಂದು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಮನೆಗಳನ್ನು ಧ್ವಂಸ ಮಾಡಿದ್ದಾರೆ‌
ಆ ದೇಶದ ಹಿಂದುಗಳಿಗೆ ಸಾಂತ್ವಾನ ಹೇಳನ ಭಾರತದಲ್ಲಿ ಪ್ರತಿಭಟನೆ ಹಾಗೂ ಪಂಜಿನ ಮೆರವಣಿಗೆಯನ್ನು ನಡೆಸುತ್ತಿದ್ದೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶದ ಹಿಂದುಗಳಿಗೆ ನ್ಯಾಯ ದೊರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರಭಾಕರ್, ಸಂತೋಷ್ ಶೆಟ್ಟಿ ಜಿಕೆ ಗಿರೀಶ್, ಭಜರಂಗದಳ ಮುಖಂಡ ಗಿರೀಶ್ ಕುಂದಾಪುರ, ಶೇಖರ್ ಪೂಜಾರಿ, ರತ್ನಾಕರ್ ಕುಂದಾಪುರ, ರಾಜೇಶ್ ಕಡಿಗೆ ಮನೆ ಪ್ರದೀಪ್ ಬಸ್ರೂರು ನಿರಂಜನ್, ಸತೀಶ್ ಶೆಟ್ಟಿ, ಸುನಿಲ್ ಕುಮಾರ್ ಸುರೇಂದ್ರ ಸಂಗಮ್, ಕರಣ್ ಉಪ್ಪಿಂಕುದ್ರು, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ನಗರದ ಶಾಸ್ತ್ರಿ ಸರ್ಕಲ್ ನಿಂದ ಪ್ರಾರಂಭವಾದ ಪಂಜಿನ ಮೆರವಣೆಗೆ ನಗರದಾದ್ಯಂತ ಸಂಚರಿಸಿ ಶಾಸ್ತ್ರಿ ವೃತ್ತದಲ್ಲಿ ಕೊನೆಗೊಂಡಿತು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss