ಟವಲ್ ಸುತ್ತಿಕೊಂಡು ಮೆಟ್ರೋಗೆ ಬಂದ ವ್ಯಕ್ತಿ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟವಲ್ ಸುತ್ತಿಕೊಂಡು ಮನೆಯಿಂದ ಹೊರಗೆ ಬರುವಾಗಲೇ ಜನ ಮೇಲಿಂದ ಕೆಳಗೆ ನೋಡ್ತಾರೆ ಟವಲ್ ಸಹವಾಸ ಬೇಡ, ಅಟ್ಲೀಸ್ಟ್ ಶಾರ್ಟ್ಸ್ ಆದ್ರೂ ಹಾಕೋಣ ಎಂದು ಹುಡುಗರು ಆಲೋಚಿಸುತ್ತಾರೆ.
ಆದರೆ ಇಲ್ಲೊಬ್ಬ ಹಾಯಾಗಿ ಟವಲ್ ಸುತ್ತಿಕೊಂಡು ಮೆಟ್ರೋ ಇಡೀ ಓಡಾಡಿದ್ದಾನೆ.

ವಿಡಿಯೋ ಕೂಡ ವೈರಲ್ ಆಗಿದ್ದು, ಮನೆಯಲ್ಲಿ ನೀರಿರಲಿಲ್ಲ, ಆಫೀಸ್‌ನಲ್ಲೇ ಸ್ನಾನ ಮಾಡ್ತೀನಿ ಎಂಬ ಕ್ಯಾಪ್ಷನ್‌ನೊಂದಿಗೆ ವಿಡಿಯೋ ಅಪ್‌ಲೋಡ್ ಆಗಿದೆ. ಮೆಟ್ರೋ ಹತ್ತಿದ ಮೇಲೆ ಸುಮ್ಮನೆ ನಿಲ್ಲದೆ ಅಲ್ಲಿ ಇಲ್ಲಿ ಓಡಾಡಿ ಗಮನ ಸೆಳೆಯಲು ಯತ್ನಿಸಿದ್ದಾರೆ. ವಿಡಿಯೋ ಅಪ್‌ಲೋಡ್ ಮಾಡಿದ್ದು ಕಂಟೆಂಟ್ ಕ್ರಿಯೇಟರ್ ಮೋಹಿತ್ ಗೌಹಾರ್.

ಈ ವಿಡಿಯೋ ಪರ ಹಾಗೂ ವಿರೋಧ ಸಾಕಷ್ಟು ಕಮೆಂಟ್ಸ್ ಬಂದಿದ್ದು, ಈ ರೀತಿ ಓಡಾಡೋಕೆ ಧೈರ್ಯ ಬೇಕು ಎಂದು ಕೆಲವರು ಹೇಳಿದ್ದಾರೆ. ಇನ್ನು ಸ್ವಲ್ಪ ಜನ ಈ ರೀತಿ ಮಾಡೋಕೆ ಒಂಥರಾ ಆಗೋದಿಲ್ವಾ ಎಂದು ಮೂಗು ಮುರಿದಿದ್ದಾರೆ. ಒಟ್ಟಾರೆ ವಿಡಿಯೋ ಇಷ್ಟಪಡದವರೂ ವಿಡಿಯೋ ನೋಡಿದ್ದು ಮೂರು ಮಿಲಿಯನ್ ವ್ಯೂಸ್ ವಿಡಿಯೋಗೆ ಬಂದಿದೆ.

https://www.instagram.com/reel/CltCaoBPUsD/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!