ಹೂವಿನ ಬಳ್ಳಿಯಂತ ರಸ್ತೆ…‌ ಕರ್ನಾಟಕದ ರಸ್ತೆಯನ್ನು ಮೆಚ್ಚಿಕೊಂಡು ಕೇಂದ್ರ ಸಚಿವರ ಟ್ವಿಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್‌ 
ಕರ್ನಾಟಕದ ಹುಬ್ಬಳ್ಳಿಯಲ್ಲಿ ಹೊಸ ರಿಂಗ್ ರೋಡ್‌ ಅಂದಚಂದಕ್ಕೆ ಇಂಟರ್‌ನೆಟ್ ಬಳಕೆದಾರರು ಬೆರಗಾಗಿದ್ದಾರೆ. ಗಬ್ಬೂರಿನ ಹೊರವಲಯದಲ್ಲಿ ನಿರ್ಮಿಸಲಾದ ರಸ್ತೆಯ ಚಿತ್ರವನ್ನು ಟ್ವಿಟ್‌ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಸ್ತೆ ಹೂವಿನ ಬಳ್ಳಿಯಂತೆ ಕಾಣುತ್ತಿದೆ.. ಎಂದು ಬಣ್ಣಿಸಿದ್ದಾರೆ.
ಈ ಚಿತ್ರವೀಗ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾರಿ ಪ್ರಶಂಸೆಯನ್ನು ಗಳಿಸುತ್ತಿದೆ.
ಕರ್ನಾಟಕದ ಧಾರವಾಡದ ಲೋಕಸಭಾ ಸಂಸದರೂ ಆಗಿರುವ ಜೋಶಿ, ಹುಬ್ಬಳ್ಳಿಯನ್ನು ‘ಸ್ಮಾರ್ಟ್ ಸಿಟಿ’ ಮಾಡಲು ಕೈಗೊಂಡಿರುವ ಮುಂಬರುವ ಅಭಿವೃದ್ಧಿ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಗೆ ಪ್ರಸ್ತಾವನೆಗಳನ್ನು ಅನುಮೋದಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸಿದರು.
ಈ ರಸ್ತೆಯ ಚಿತ್ರಗಳನ್ನು ನೋಡಿ ಟ್ವಿಟ್ಟರ್ ಬಳಕೆದಾರರು ಆಶ್ಚರ್ಯಚಕಿತರಾಗಿದ್ದಾರೆ.ಈ ಅದ್ಭುತ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ನಿಮಗೆ ಧನ್ಯವಾದಗಳು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ರಸ್ತೆಗಳ ನಡುವಿನ ಖಾಲಿ ಜಾಗದಲ್ಲಿ ಮರಗಳನ್ನು ನೆಡುವಂತೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ಇತ್ತೀಚಿನ ತಿಂಗಳುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಕೇಂದ್ರಬಿಂದುವಾಗಿದೆ, ಅದು ಹಲವಾರು ಐಟಿ ಸಂಸ್ಥೆಗಳ ರಾಡಾರ್‌ನಲ್ಲಿದೆ ಎಂದು ಹೇಳಲಾಗುತ್ತದೆ. ಕರ್ನಾಟಕದಾದ್ಯಂತ ಅಭಿವೃದ್ಧಿಯನ್ನು ವಿಕೇಂದ್ರೀಕರಿಸುವ ಪ್ರಯತ್ನದಲ್ಲಿ ಅಭಿವೃದ್ಧಿಪಡಿಸಲಾಗುವ ಉದ್ದೇಶಿತ ‘ಸ್ಮಾರ್ಟ್ ಸಿಟಿ’ಗಳಲ್ಲಿ ಇದು ಕೂಡ ಒಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!