Sunday, April 18, 2021

Latest Posts

ಅಪರಿಚಿತ ದುಷ್ಕರ್ಮಿಗಳಿಂದ ಮಹಿಳೆಯ ಮಾಂಗಲ್ಯ ಸರ ಅಪಹರಣ

ಹೊಸ ದಿಗಂತ ವರದಿ, ಮದ್ದೂರು:

ಅಪರಿಚಿತ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ಮಹಿಳೆಗೆ ಕೈ ಕಾಲು ಕಟ್ಟಿಹಾಕಿ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಸಮೀಪದ ಮೆಳ್ಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೆಳ್ಳಹಳ್ಳಿ ಗ್ರಾಮದ ಗ್ರಾ.ಪಂ ಮಾಜಿ ಸದಸ್ಯ ಕರಿಯಪ್ಪನವರ ಸೊಸೆ ಶಶಿಕಲಾಪ್ರಸನ್ನ ಎಂಬುವವರೇ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ.
ಶಶಿಕಲಾ ಮನೆಯಲ್ಲಿ ಒಬ್ಬರೆ ಇದ್ದನ್ನು ನೋಡಿಕೊಂಡಿದ್ದ ಅಪರಿಚಿತ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ಹಣೆಗೆ ಕಪ್ಪು ಇಟ್ಟು ಪ್ರಜ್ಞೆ ತಪ್ಪಿಸಿ ನಂತರ ಅಡುಗೆ ಮನೆಯಲ್ಲಿ ಕೈಕಾಲು ಕಟ್ಟಿಹಾಕಿ ಶಶಿಕಲಾಪ್ರಸನ್ನ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಶಶಿಕಲಾ ಅವರನ್ನು ಸಹೋದರ ಪ್ರದೀಪ್ ಮನೆಗೆ ಹೋದಾಗ ಅಕ್ಕಳಾ ಕೈಕಾಲು ಕಟ್ಟಿಹಾಕಿರುವುದನ್ನು ನೋಡಿ ಗಾಬರಿಗೊಂಡು ಅಕ್ಕ-ಪಕ್ಕದವರಿಗೆ ವಿಚಾರ ಮುಟ್ಟಿಸಿದ್ದಾನೆ. ತಕ್ಷಣ ಶಶಿಕಲಾ ಪ್ರಸನ್ನ ಪ್ರಜ್ಞೆ ತಪ್ಪಿರುವುದನ್ನು ನೋಡಿ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲು ಪಡಿಸಿದ್ದಾರೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ಶಶಿಕಲಾ ಅವರ ಸಹೋದರ ಪ್ರದೀಪ್ ಅವರು ದೂರು ನೀಡಿದ್ದಾರೆ. ದೂರಿನ ಮೇರೆಗೆ ಕೆ.ಎಂ.ದೊಡ್ಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಲಕ್ಷ್ಮಿನಾರಾಯಣಪ್ರಸಾದ್, ಸರ್ಕಲ್ ಇನ್ಸ್‌ಪೆಕ್ಟರ್ ಶಿವಮಲವಯ್ಯ, ಸಬ್‌ಇನ್ಸ್‌ಪೆಕ್ಟರ್ ಶೇಷಾದ್ರಿ, ಬೆರಳಚ್ಚುದಾರರು, ಶ್ವಾನದಳದೊಂದಿಗೆ ಭೇಟಿನೀಡಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss