ಸಾಕಿದ ಶ್ವಾನಕ್ಕೆ ಸೀಮಂತ ಮಾಡಿದ ಮಹಿಳೆ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯಿರಗೆ ಮಾತ್ರ ಸೀಮಂತ ಮಾಡ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳಿಗೂ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಹಸುಗಳು ಮತ್ತು ಬೆಕ್ಕುಗಳಿಗೆ ಸೀಮಂತ ಮಾಡಿದ ಸುದ್ದಿಗಳು ಹರಿದಾಡಿದ್ದವು. ಇದೀಗ  ಸಾಕು ನಾಯಿಗೂ ಸೀಮಂತ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಜಾತಾ ಭಾರತಿ ಈ ವಿಡಿಯೋವನ್ನು ಶೇರ್ ಮಾಡಿದಾಗಿನಿಂದ 50 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಸುಜಾತಾ ನಾಯಿಗೆ ಹೊಸ ಬಟ್ಟೆ ತೊಡಿಸಿ ಅರಿಶಿನ ಕುಂಕುಮ ಹಚ್ಚುತ್ತಿರುವುದನ್ನು ಕಾಣಬಹುದು. ಅಲ್ಲದೆ ನಾಯಿಗೆ ಇಷ್ಟವಾದ ಆಹಾರ ಪದಾರ್ಥಗಳಿರುವ ತಟ್ಟೆಗಳೂ ಇದ್ದವು.

ಕೊನೆಗೆ ಸುಜಾತಾ ಅವರು ಬೀದಿ ನಾಯಿಗಳಿಗೆ ಮನೆಯಲ್ಲಿ ತಯಾರಿಸಿದ ಆಹಾರ ನೀಡಿದದ್ದು ನೆಟ್ಟಿಗರ ಮನಗೆದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!