ಹೊಸದಿಗಂತ ವರದಿ ವಿಟ್ಲ :
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪರಿಸರದ ಮಂಗಳೂರು ರಸ್ತೆ ಲಾಡ್ಜಿನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಆತಂಕ ಮೂಡಿಸಿದೆ.
ವ್ಯಕ್ತಿಯನ್ನು ಕೇರಳ ಮೂಲದ ಸುಜೇಶ್(35) ಎಂದು ಗುರುತಿಸಲಾಗಿದೆ. ಇವರು ಲಾಡ್ಜಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ವಾಸಿಸುತ್ತಿದ್ದನೆನ್ನಲಾಗಿದ್ದು, ಭಾನುವಾರ ಏಕಾಏಕಿ ರಕ್ತದ ಮಡುವಿನಲ್ಲಿ ಕಾಣಸಿಕ್ಕಿದ್ದರು.
ವಿಟ್ಲ ಪೊಲೀಸರಿಗೆ ಮಾಹಿತಿ ತಿಳಿದ ಬಳಿಕ ಸಂಬಂಧಿಕರಿಗೆ ಮಾಹಿತಿ ನೀಡಿ, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.