Thursday, July 7, 2022

Latest Posts

ಬೆಂಕಿ ಉರಿಯುತ್ತಿರುವ ʼಗೋಲ್‌ಗಪ್ಪʼ ಬಾಯಲ್ಲಿಟ್ಟುಕೊಂಡ ಯುವತಿ: ಅಚ್ಚರಿ ವಿಡಿಯೋ ವೈರಲ್

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಪಾನ್‌ ಬೀಡಾಗಳಿಗೆ ಬೆಂಕಿ ಹತ್ತಿಸಿ ಅದನ್ನು ಹಾಗೇ ಬಾಯಲ್ಲಿ ಇಟ್ಟುಕೊಳ್ಳುವ ದೃಶ್ಯವನ್ನು ನೀವು ಖಂಡಿತ ನೋಡಿರುತ್ತೀರಾ. ಆದರೆ ಎಂದಾದರೂ ಗೋಲ್‌ಗಪ್ಪಕ್ಕೂ ಪಾನ್‌ ಬೀಡಾದಂತೆಯೇ ಬೆಂಕಿ ಹತ್ತಿಸಿ ಅದನ್ನು ಹಾಗೇ ಬಾಯಲ್ಲಿಟ್ಟುಕೊಂಡು ಸವಿಯುವ ದೃಶ್ಯವನ್ನು ನೋಡಿದ್ದೀರಾ? ಬಹುಶ: ನೋಡಿರಲಿಕ್ಕಿಲ್ಲ.

ಇದೀಗ ಬೆಂಕಿ ಗೋಲ್‌ಗಪ್ಪದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ನೆಟ್ಟಿಗರು ಈ ದೃಶ್ಯ ನೋಡಿ ಸಿಕ್ಕಾಪಟ್ಟೆ ಅಚ್ಚರಿಗೊಳಗಾಗಿದ್ದಾರೆ.

ಅಹಮದಾಬಾದ್‌ನಲ್ಲಿ ಈ ದೃಶ್ಯ ಸೆರೆಯಾಗಿದೆ.  ಯುವತಿಯೊಬ್ಬರು ರಸ್ತೆ ಪಕ್ಕದಲ್ಲಿ ನಿಂತು ಬೆಂಕಿ ಉರಿಯುತ್ತಿರುವ ಗೋಲ್‌ಗಪ್ಪವನ್ನು ಸವಿಯುತ್ತಿರುವ ದೃಶ್ಯ ಇದಾಗಿದೆ. ಆಗಾಗ ಫುಡ್‌ಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಈ ಸಲ ಗೋಲ್‌ಗಪ್ಪ ಮೇಲೆ ಬೆಂಕಿ ಪ್ರಯೋಗ ನಡೆದಿದೆ.

https://www.instagram.com/p/CWveFgfoMf8/?utm_source=ig_embed&utm_campaign=embed_video_watch_again

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss