Tuesday, July 5, 2022

Latest Posts

ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವ ಹಾಕಿಪಟು ಸಾವು

ಹೊಸದಿಗಂತ ವರದಿ, ಮಡಿಕೇರಿ:

ಆಟವಾಡುತ್ತಿದ್ದ ಸಂದರ್ಭ ಹೃದಯಾಘಾತಕ್ಕೊಳಗಾಗಿ ಯುವ ಹಾಕಿ ಆಟಗಾರ ಸಾವಿಗೀಡಾದ ಘಟನೆ ಶನಿವಾರ ಮೂರ್ನಾಡಿನಲ್ಲಿ ನಡೆದಿದೆ.
ತೊತ್ತಿಯಂಡ ಪ್ರೀತಂ ಸೋಮಯ್ಯ (22) ಎಂಬವರೇ ಮೃತಪಟ್ಟ ಹಾಕಿ ಪಟು.
ಮೂರ್ನಾಡುವಿನ ಲಾಲು‌ ಮುದ್ದಯ್ಯ ಮೈದಾನದಲ್ಲಿ ಎರಡು ದಿನಗಳಿಂದ ಚೌರೀರ ಹಾಕಿ ಪಂದ್ಯಾವಳಿ ನಡೆಯುತ್ತಿದ್ದು, ಶನಿವಾರ ಹಾಕಿ ಆಟದಲ್ಲಿ ನಿರತರಾಗಿದ್ದ ಸಂದರ್ಭ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ತೊತ್ತಿಯಂಡ ವಿಠಲ್ ದೇವಯ್ಯ ಅವರ ಪುತ್ರರಾಗಿರುವ ಸೋಮಯ್ಯ ಅವರ ಸಾವು ಕ್ರೀಡಾಭಿಮಾನಿಗಳಲ್ಲಿ ಆಘಾತ ಉಂಟು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss