ಹೊಸದಿಗಂತ ವರದಿ, ಮಳವಳ್ಳಿ:
ತಾಲ್ಲೂಕಿನ ಶಿವನಸಮುದ್ರದ ಗಗನ ಚುಕ್ಕಿ ಜಲಪಾತದ ಬಳಿ ಭಾನುವಾರ ಕಾಲು ಜಾರಿ ಬಿದ್ದು ಗುಜರಾತ್ ರಾಜ್ಯದ ಚೌದರಿ ಕೌಶಿಕ್(26) ಎಂಬುವರು ಮೃತಪಟ್ಟಿದ್ದಾರೆ.
ಬೆಂಗಳೂರಿನ ನೀಲಸಂದ್ರದಲ್ಲಿರುವ ಲ್ಯಾಂಡ್ ಮಿಲಿಟರಿ ತರಬೇತಿ ಕೇಂದ್ರದಲ್ಲಿ ಮಿಲಿಟರಿ ಪೊಲೀಸ್ ಸಿಬ್ಬಂದಿಯಾಗಿದ್ದ ಚೌಧರಿ ಕೌಶಿಕ್ ತನ್ನ ಏಳು ಮಂದಿ ಸ್ನೇಹಿತರೊಂದಿಗೆ ಭಾನುವಾರ ಗಗನ ಚುಕ್ಕಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಕೆಳಗಡೆ ಇಳಿಯುವ ವೇಳೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಶವಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.