ಪುತ್ತೂರು | ವಿದ್ಯುತ್ ಶಾಕ್ ಹೊಡೆದು ಯುವಕ ಸಾವು

ಹೊಸದಿಗಂತ ವರದಿ, ಪುತ್ತೂರು:

ವಿದ್ಯುತ್ ತಗುಲಿ ಯುವಕ ಮೃತಪಟ್ಟ ಘಟನೆ ಸೋಮವಾರ ಕಡಬ ತಾಲೂಕಿನ ಪಂಜದಲ್ಲಿ ನಡೆದಿದೆ.

ಬೆಳ್ತಂಗಡಿಯ ಮೊಗ್ರು ಸಮೀಪದ ನಡುಎರ್ಮಲ್ ನ ಪ್ರಕಾಶ್(29) ಎಂಬವರೇ ಮೃತಪಟ್ಟ ದುರ್ದೈವಿ.

ಪಂಜದ ಅಲೆಕ್ಕಾಡಿ ಸಮೀಪದ ಪಿಜಾವ್ ನಲ್ಲಿ ಪ್ರಕಾಶ್ ಅವರು ವಿದ್ಯುತ್ ಕಂಬ ಏರಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ಗುತ್ತಿಗೆದಾರರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ವಿದ್ಯುತ್ ಲೈನ್ ಸರಿಪಡಿಸುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಸಾವು ಸಂಭವಿಸಿದೆ.

ಬೆಳ್ಳಾರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!