ನಂದಿಬೆಟ್ಟದಲ್ಲಿ ಟ್ರಕ್ಕಿಂಗ್‌ ವೇಳೆ ಕಾಲು ಜಾರಿ ಬಿದ್ದ ಯುವಕ: ವಾಯುಪಡೆಯಿಂದ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಟ್ರಕ್ಕಿಂಗ್‌ ಮಾಡುವ ವೇಳೆಯಲ್ಲಿ ಗುಡ್ಡದಿಂದ ಯುವಕನೊಬ್ಬ ಜಾರಿ ಬಿದ್ದ ಘಟನೆ ಸಂಭವಿಸಿದೆ.
ಟ್ರಕ್ಕಿಂಗ್​ಗೆ ಹೋಗಿದ್ದ ನಿಶಾಂತ್​ ಗುಲ್ಲಾ(19) ನಂದಿಗಿರಿ ಧಾಮ ಪಕ್ಕದ ಬ್ರಹ್ಮಗಿರಿ ಬೆಟ್ಟದಿಂದ ಜಾರಿ ಬಿದ್ದಿದ್ದು, ಜಾರಿ ಬಿದ್ದಿರುವ ಯುವಕ ಅಸ್ವಸ್ಥನಾಗಿದ್ದಾನೆ.
ಟ್ರಕ್ಕಿಂಗ್​ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿರುವ ನಿಶಾಂತ್​ ನಿರ್ಜನ ಪ್ರದೇಶದಲ್ಲಿ ಸಿಲುಕಿದ್ದು, ಪ್ರಾಣ ರಕ್ಷಣೆಗಾಗಿ ಮೊರೆಯಿಟ್ಟಿದ್ದಾನೆ. ಯುವಕನನ್ನು ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ. ಜಾರಿಬಿದ್ದ ಕೂಡಲೇ ಯುವಕ ಕಂಟ್ರೋಲ್ ರೂಂ ಸುದ್ದಿ ಮುಟ್ಟಿಸಿ ನಂತರ ಮನೆಯವರಿಗೂ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ವಾಯುಪಡೆ ಯುವಕನನ್ನು ರಕ್ಷಿಸಿದೆ. ಸದ್ಯ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!