11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :
 
ಬೆಂಗಳೂರಿನ ಚಾಲುಕ್ಯ ಸರ್ಕಲ್‌ನ ಎಚ್‌ಪಿ-3 ಅಪಾರ್ಟ್‌ಮೆಂಟ್‌ನ 11ನೇ ಮಹಡಿ ಮೇಲಿಂದ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಪ್ರಕರಣ ಭಾನುವಾರ ಸಂಜೆ ನಡೆದಿದೆ.

11ನೇ ಮಹಡಿಯಿಂದ ಹಾರಿ ಕೆಳಗೆ ಇದ್ದ ಕಾರಿನ ಮೇಲೆ ಬಿದ್ದಿದ್ದಾಳೆ. ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಆತ್ಮಹತ್ಯೆಗೆ ಮುನ್ನ ಯುವತಿ ಹಿಂದಿಯಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಳು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಹೇಳಿದ್ದಾರೆ.
ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಮೃತ ಯುವತಿ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಮೇಲ್ನೋಟಕ್ಕೆ ಯುವತಿ ಅಪಾರ್ಟ್‌ಮೆಂಟ್ ನಿವಾಸಿಯಲ್ಲ ಎನ್ನಲಾಗುತ್ತಿದೆ. ಹೊರಗಡೆಯಿಂದ ಫೋನಿನಲ್ಲಿ ಮಾತನಾಡಿಕೊಂಡು ಬಂದರು ಎಂದು ಸೆಕ್ಯುರಿಟಿ ಗಾರ್ಡ್ ಹೇಳಿದ್ದಾರೆ. ಮೊದಲಿಗೆ ಯುವತಿ ಎಚ್‌ಪಿ-3 ಅಪಾರ್ಟ್‌ಮೆಂಟ್‌ ಮುಂಭಾಗದ ಕಟ್ಟಡದ ಒಳಗೆ ಹೋಗಲು ಯತ್ನಿಸಿದ್ದಾಳೆ. ಇದು ಸಾಧ್ಯವಾಗದ ಕಾರಣಕ್ಕೆ ಮತ್ತೊಂದು ಅಪಾರ್ಟ್‌ಮೆಂಟ್‌ಗೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!