VIRAL NEWS | ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿ ಮದುವೆಯಾಗಲು ಭಾರತಕ್ಕೇ ಬಂದಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿಗೆ ದೇಶ, ಜಾತಿಗಳ ಅಂತರವಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗಿ ಪ್ರೀತಿಯಿಂದ ಇಷ್ಟಪಟ್ಟು ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ದೇಶದ ಅಂತರ ಇಲ್ಲವೇ ಇಲ್ಲ.

ಸ್ವೀಡಿಶ್ ಯುವತಿ ಭಾರತದ ಯುವಕನಿಗಾಗಿ ಭಾರತಕ್ಕೇ ಬಂದುಬಿಟ್ಟಳು..
ಹೌದು, ಫೇಸ್‌ಬುಕ್‌ನಲ್ಲಿ ಕ್ರಿಸ್ಟೆನ್ ಹಾಗೂ ಪವನ್ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿದೆ. ತದನಂತರ ಮದುವೆಗೆ ಇಬ್ಬರೂ ಸಮ್ಮತಿಸಿ, ವಿವಾಹ ನೆರವೇರಿದೆ.

ಇವರಿಬ್ಬರ ಮದುವೆ ಫೋಟೊಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಆರು ಸಾವಿರ ಕಿ.ಮೀ ಕ್ರಮಿಸಿ ಕ್ರಿಸ್ಟೆನ್ ಉತ್ತರಪ್ರದೇಶದ ಎಟಾ ನಗರಕ್ಕೆ ಬಂದೇ ಬಿಟ್ಟಿದ್ದಾಳೆ. ಎಟಾದ ಶಾಲೆಯೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಕ್ರಿಸ್ಟೆನ್ ಹಾಗೂ ಪವನ್ ಮದುವೆ ನೆರವೇರಿದೆ.

ನನ್ನ ಮನೆಯವರಿಗೆ ಕ್ರಿಸ್ಟೆನ್ ಸ್ವೀಡೀಶ್ ಎನ್ನುವುದು ಸಮಸ್ಯೆಯೇ ಇಲ್ಲ ಎಂದು ಪವನ್ ಹೇಳಿದ್ದರೆ, ಈ ಹಿಂದೆಯೂ ಭಾರತಕ್ಕೆ ಬಂದಿದ್ದೇನೆ, ಈ ದೇಶ ನನಗೆ ಇಷ್ಟ. ಇಲ್ಲಿನ ಹುಡುಗನನ್ನು ಮದುವೆಯಾಗಿದ್ದು ಖುಷಿ ಎಂದು ಕ್ರಿಸ್ಟೆನ್ ಹೇಳಿಕೊಂಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!