ಮೆಟ್ರೋ ಸ್ಟೇಷನ್ನಿನಲ್ಲಿ ಬರ್ತಡೇ ಆಚರಿಸಿಕೊಂಡ ಯೂಟ್ಯೂಬರ್‌ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೆಟ್ರೋ ಸ್ಟೇಷನ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯೂಟ್ಯೂಬರ್‌ ಗೌರವ್‌ ತನೇಜಾ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಗೌರವ್‌ ತನೇಜಾ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 51 ಮೆಟ್ರೋ ನಿಲ್ದಾಣದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.ಹುಟ್ಟು ಹಬ್ಬದ ಆಚರಣೆಗೆ ಅವರ ಅನುಯಾಯಿಗಳು ಭಾರೀ ಸಂಖ್ಯೆಯಲ್ಲಿ ಮೆಟ್ರೋ ಸ್ಟೇಷನ್‌ ಗೆ ನುಗ್ಗಿದ ಪರಿಣಾಮ ಭಾರೀ ನೂಕುನುಗ್ಗಲು ಸಂಭವಿಸಿದ್ದರಿಂದ ಪೋಲೀಸರು ಯೂಟ್ಯೂಬರ್‌ ತನೇಜಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ನೋಯ್ಡಾ ಮೆಟ್ರೋ ನಿಲ್ದಾಣದಲ್ಲಿ ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಾಗಿ ತನೇಜಾ Instagram ಮೂಲಕ ತಮ್ಮ ಅನುಯಾಯಿಗಳಿಗೆ ತಿಳಿಸಿದ್ದರು. ಅವರನ್ನು ಭೇಟಿ ಮಾಡಲು ಸಾವಿರಾರು ಜನರು ಸೆಕ್ಟರ್ 51 ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದರು. ಇದರಿಂದಾಗಿ ದಿಢೀರ್‌ ನೂಕುನುಗ್ಗಲು ಉಂಟಾಗಿ ಮೆಟ್ರೋ ಮಾರ್ಗವಾಗಿ ತೆರಳುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಅಭಿಮಾನಿಗಳನ್ನು ಸುಧಾರಿಸಲು ಮೆಟ್ರೋ ನೌಕರರೂ ಹರಸಾಹಸ ಪಡಬೇಕಾಯಿತು. ತಕ್ಷಣವೇ ನೋಯ್ಡಾ ಸೆಕ್ಟರ್ 49 ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ಸಮಾಧಾನಪಡಿಸಿದರು. ಟ್ರಾಫಿಕ್ ಜಾಮ್ ಆಗಿದ್ದ ರಸ್ತೆಗಳನ್ನು ತೆರವುಗೊಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!