ಆಧಾರ್-ಪ್ಯಾನ್‌ ಲಿಂಕ್ ಮಾಡೋಕೆ ಮಾ.31 ಡೆಡ್‌ಲೈನ್-‌ ಹೇಗೆ ಪರಿಶೀಲಿಸೋದು? ಇಲ್ಲಿದೆ ನೋಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಧಾರ್‌ ಕಾರ್ಡ್‌ ಹಾಗು ಪ್ಯಾನ್‌ ಕಾರ್ಡ್‌ (PAN Card) ಲಿಂಕ್‌ ಮಾಡಲು ಮಾ.31 ಕೊನೆಯ ದಿನವಾಗಿದೆ. ಲಿಂಕ್‌ ಆಗದ ಪ್ಯಾನ್‌ ಕಾರ್ಡುಗಳು ಇನ್ನುಮುಂದೆ ರದ್ದಾಗಲಿವೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಘೋಷಿಸಿದೆ. ಲೊಂಕ್‌ ಮಾಡಲು ವಿಫಲರಾದವರಿಗೆ ಹೆಚ್ಚಿನ ತೆರಿಗೆ ಬೀಳಲಿದೆ ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಲಿಂಕ್‌ ಮಾಡಲು ಕೊನೆಯ ಗಡುವಿನ ಅವಧಿ ಕೇವಲ ಒಂದುವಾರವಿದೆ. ನಿಮ್ಮ ಆಧಾರ್-ಪ್ಯಾನ್‌ ಜೋಡನೆಯ ಕುರಿತು ಅನುಮಾನಗಳಿದ್ದರೆ ಎರಡು ವಿಧಾನ ಗಳಲ್ಲಿ ಅದನ್ನು ಪರಿಶೀಲಿಸಬಹುದಾಗಿದ್ದು ಅವುಗಳೆಂದರೆ

SMS ವಿಧಾನದ ಮೂಲಕ:

  • ನಿಮ್ಮ ಮೊಬೈಲ್‌ ನಲ್ಲಿ “UIDPAN” ಎಂದು ಟೈಪ್‌ ಮಾಡಿ ನಂತರದಲ್ಲಿ ನಿಮ್ಮ 12 ಅಂಕೆಯ ಆಧಾರ್‌ ಸಂಖ್ಯೆ ಹಾಗು ಪಾನ್‌ ಸಂಖ್ಯೆಯನ್ನು ನಮೂದಿಸಿ. ಉದಾ: UIDPAN**************   (* ಇರುವ ಜಾಗದಲ್ಲಿ ನಿಮ್ಮ ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆ ನಮೂದಿಸಿ)
  • ಈ ಟೈಪ್‌ ಮಾಡಿದ ಸಂದೇಶವನ್ನು 56161 ಅಥವಾ 567678 ಗೆ ಕಳುಹಿಸಿ.
  • ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗಿದೆಯೇ ಎಂಬ ಕುರಿತು ಸಂದೇಶವೊಂದು ಬರುತ್ತದೆ. ಅದರ ಮೂಲಕ ತಿಳಿದುಕೊಳ್ಳಿ (ವಿ.ಸೂ.: ಯಾವುದೇ ಕಾರಣಕ್ಕೂ ಆಧಾರ್‌ ಪಾನ್‌ ಲಿಂಕ್ ಮಾಡುವ ಹೆಸರಿನಲ್ಲಿ ನಕಲಿ ಸಂದೇಶಗಳಿಗೆ ಮೋಸ ಹೋಗಬೇಡಿ)

ಇನ್‌ಕಂ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್ ಮೂಲಕ:

  • incometax.gov.in/iec/foportal ವೆಬ್‌ಸೈಟ್‌ಗೆ ಭೇಟಿ ನೀಡಿ.
  • ʼಕ್ವಿಕ್ ಲಿಂಕ್ಸ್’ ವಿಭಾಗದ ಅಡಿಯಲ್ಲಿ ‘ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಕ್ಲಿಕ್ ಮಾಡಿ
  • ನಿಮ್ಮ ಪ್ಯಾನ್‌ ಸಂಖ್ಯೆ ಮತ್ತು 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ʼView link status’ ಆಯ್ಕೆಮಾಡಿ.
  • ನಿಮ್ಮ ಪ್ಯಾನ್-ಆಧಾರ್ ಲಿಂಕ್ ಆಗಿದ್ದರೆ ಅಲ್ಲಿ ನಿಮ್ಮ ಆಧಾರ್‌ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ. ಇಲ್ಲದಿದ್ದರೆ, ನೀವು ಎರಡನ್ನೂ ಲಿಂಕ್ ಮಾಡಬೇಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!