Sunday, September 25, 2022

Latest Posts

ನನ್ನ ಸಿನಿಮಾ ಬಹಿಷ್ಕರಿಸುವ ನಿಮ್ಮ ಭಾವನೆಯನ್ನು ನಾನು ಗೌರವಿಸುತ್ತೇನೆ: ಅಮೀರ್‌ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್, ಕರೀನಾ ಕಪೂರ್ ಮತ್ತು ನಾಗ ಚೈತನ್ಯ ನಟಿಸಿರುವ ‘ಲಾಲ್ ಸಿಂಗ್ ಚಡ್ಡಾ’ ನಾಳೆ ತೆರೆಗೆ ಬರಲಿದೆ. ಈ ಚಿತ್ರ ಹಾಲಿವುಡ್ ಸೂಪರ್ ಹಿಟ್ ಸಿನಿಮಾ ‘ಫಾರೆಸ್ಟ್ ಗಂಪ್’ ರಿಮೇಕ್ ಆಗಿದ್ದು, ನಾಗ ಚೈತನ್ಯ ಕೂಡ ನಟಿಸುತ್ತಿರುವುದರಿಂದ ತೆಲುಗಿನಲ್ಲೂ ಭರ್ಜರಿ ಪ್ರಚಾರ ನಡೆಯುತ್ತಿದೆ. ಆದರೆ ಸಿನಿಮಾ ಬಹಿಷ್ಕಾರ ಅಭಿಯಾನ ಕುರಿತಂತೆ ಅಮೀರ್‌ ಖಾನ್‌ ಮಾತನಾಡಿದ್ದಾರೆ.

ಆದರೆ, ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ boycott Lal Singh Chaddha ಅಭಿಯಾನ ಶುರುವಾಗಿದ್ದು, ಸಖತ್‌ ಟ್ರೆಂಡಿಂಗ್‌ ಆಗಿದೆ. ಕಾರಣ ಈ ಹಿಂದೆ ಅಮೀರ್ ಖಾನ್ ಭಾರತದಲ್ಲಿ ರಕ್ಷಣೆ ಇಲ್ಲ, ಇಲ್ಲಿ ವಾಸಿಸಲು ಭಯವಾಗುತ್ತಿದೆ ಎಂಬ ಕಮೆಂಟ್‌ಗಳನ್ನು ಮಾಡಿ ಟೀಕೆಗೆ ಗುರಿಯಾಗಿದ್ರು. ಇದೀಗ ಅದೇ ಹೇಳಿಕೆ ಅವರ ಸಿನಿಮಾಗೂ ಮುಳ್ಳಾಗಿವೆ. ಇಲ್ಲಿ ಯಾಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೀರಿ? ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ರಿಲೀಸ್‌ ಮಾಡಿ ಎಂದು ಸಿನಿಮಾ ಬಹಿಷ್ಕರಿಸುವ ಟ್ರೆಂಡ್ ಮಾಡುತ್ತಿದ್ದಾರೆ.

ಈ ಹಿಂದೆಯೇ ಸಿನಿಮಾ ಬಹಿಷ್ಕರಿಸದಂತೆ ಅಮೀರ್‌ ಖಾನ್‌ ಮನವಿ ಮಾಡಿದ್ರು. ಇದೀಗ ಮತ್ತಮ್ಮೆ ಪ್ರತಿಕ್ರಿಯೆ ನೀಡಿದ್ದು, ”ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಸಿನಿಮಾ ನೋಡಲು ಇಷ್ಟವಿಲ್ಲದಿದ್ದರೆ, ನಾನು ಅವರ ಭಾವನೆಗೆ ಗೌರವ ನೀಡುತ್ತೇನೆ,” ಎಂದರು. ಈ ಬಹಿಷ್ಕಾರ ಅಭಿಯಾನದಿಂದ ಸಿನಿಮಾ ಮೇಲೆ ಎಷ್ಟರ ಮಟ್ಟಿಗೆ ನೆಗೆಟಿವ್ ಆಗಲಿದೆ ಎಂಬುದನ್ನು ಕಾದು ನೋಡಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!