spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಶ್ ಜತೆ ಮಾತನಾಡಿ ಕ್ಷಮೆ ಕೇಳಿದ್ದೇನೆ ಎಂದ ಬಾಲಿವುಡ್ ನಟ ಆಮೀರ್ ಖಾನ್: ಕಾರಣವೇನು ಗೊತ್ತಾ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಹಾಗೂ ಕೆಜಿಎಫ್ 2 ಸಿನಿಮಾ ಒಂದೇ ದಿನ ತೆರೆ ಮೇಲೆ ಬರುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಆಮೀರ್ ಖಾನ್ ನಡುವಿನ ಸಿನಿಮಾ ಫೈಟ್’ಗೆ ಕೊನೆಗೂ ತೆರೆ ಎಳೆದಂತಾಗಿದೆ.
ಆಮೀರ್ ಖಾನ್ ತಮ್ಮ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಬಗ್ಗೆ ಯಶ್ ಹಾಗೂ ಚಿತ್ರತಂಡಕ್ಕೆ ಕ್ಷಮೆ ಕೇಳಿದ್ದೇನೆ ಎಂದು ಹೇಳಿಕೊಂಡಿರುವುದು ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಆಮೀರ್ ಖಾನ್, ನಾನು ಇದೇ ಮೊದಲ ಬಾರಿಗೆ ಸಿಖ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಏ.14ರಂದು ಬೈಸಾಕಿ ದಿನ. ಹಾಗಾಗಿ ಅವತ್ತು ರಿಲೀಸ್ ಮಾಡಲು ಯೋಜಿಸಿದ್ದೇವೆ. ರಿಲೀಸ್​ ದಿನಾಂಕ ಫೈನಲ್​ ಮಾಡುವುದಕ್ಕೂ ಮೊದಲು ಕೆಜಿಎಫ್ ನ ನಿರ್ಮಾಪಕ ವಿಜಯ್​ ಕಿರಗಂದೂರು, ನಿರ್ದೇಶಕ ಪ್ರಶಾಂತ್​ ನೀಲ್​ ಹಾಗೂ ಯಶ್​ಗೆ ಕ್ಷಮೆ ಕೇಳಿದ್ದೆ. ಅವರಿಗೆ ನಮ್ಮ ಕೆಲಸಗಳ ಬಗ್ಗೆ ವಿವರಿಸಿದ್ದೇನೆ. ಅವರೂ ಕೂಡ ಈ ಮಾತುಗಳನ್ನು ಅರ್ಥ ಮಾಡಿಕೊಂಡು, ಸಿನಿಮಾ ರಿಲೀಸ್ ಮಾಡುವಂತೆ ಹೇಳಿದ್ದಾರೆ ಎಂದು ಆಮಿರ್​ ಖಾನ್ ಹೇಳಿದ್ದಾರೆ.​.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss