ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪ್ ದೆಹಲಿ ನಗರಕ್ಕೆ ಆಪತ್ತು. ನಾನು ಜನರಿಗಾಗಿ ಮನೆ ಕಟ್ಟಿದ್ದೇನೆ, ನನಗಾಗಿ `ಶೀಷ ಮಹಲ್’ ಕಟ್ಟಿಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಪ್ರಧಾನಿ ಮೋದಿ ಟಾಂಗ್ ಕೊಟ್ಟಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ‘ಜುಗ್ಗಿ – ಜೋಪ್ರಿ’ (ಜೆಜೆ) ಕ್ಲಸ್ಟರ್‌ಗಳಿಗಾಗಿ 1,675 ಫ್ಲಾಟ್‌ಗಳು ಮತ್ತು ಎರಡು ನಗರ ಪುನರಾಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಮೋದಿ ಎಂದಿಗೂ ತಮಗಾಗಿ ಮನೆಯನ್ನು ನಿರ್ಮಿಸಲಿಲ್ಲ. ಆದರೆ, ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದಾರೆ ಎಂದು ದೇಶಕ್ಕೆ ಚೆನ್ನಾಗಿ ತಿಳಿದಿದೆ ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ದೆಹಲಿಯಲ್ಲಿ ವಿಪತ್ತು ಸುತ್ತುವರಿದಿದೆ. ಅಣ್ಣಾ ಹರಾಜೆ ಅವರನ್ನು ಮುಂದಿಟ್ಟುಕೊಂಡು ಬಂದ ಕೆಲವರು ಅಪ್ರಮಾಣಿಕರು ದೆಹಲಿಯನ್ನು ಆಪತ್ತಿಗೆ ತಳ್ಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.