ಮೋದಿ ಕುರಿತಾಗಿ ಕ್ರಾಪ್‌ ವಿಡಿಯೋ ಶೇರ್‌ ಮಾಡಿದ ಆಪ್‌ ಮುಖಂಡ: ದಾರಿತಪ್ಪಿಸುವ ವಿಡಿಯೋ ಎಂದ ಟ್ವೀಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ಮೋದಿಯವರ ಕ್ರಾಪ್‌ ವಿಡಿಯೋವೊಂದನ್ನು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್ ವಕ್ತಾರ ರೋಹನ್ ಗುಪ್ತಾ ಟ್ವೀಟರ್‌ ನಲ್ಲಿ ಶೇರ್‌ ಮಾಡಿದ ಬೆನ್ನಲ್ಲೇ ಟ್ವೀಟರ್‌ ಆ ವೀಡಿಯೋಗೆ ದಾರಿತಪ್ಪಿಸುವ ವಿಡಿಯೋ ಎಂದು ಹೆಸರಿಸಿದೆ.

ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ನಿರ್ಗಮಿಸುವಾಗ ಎಲ್ಲರೂ ಅವರಿಗೆ ಶುಭಾಶಯ ಕೋರುವ ವೇಳೆಯಲ್ಲಿ ಪ್ರಧಾನಿ ಮೋದಿ ಕ್ಯಾಮೆರಾಗಳನ್ನು ನೋಡುತ್ತಿರುವ ವೀಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಆದರೆ ಈ ವೀಡಿಯೋವನ್ನು ಕ್ರಾಪ್‌ ಮಾಡಲಾಗಿದ್ದು ನಿಜವಾದ ವಿಡಿಯೋದಲ್ಲಿ ಮೋದಿಯವರು ಕೈ ಜೋಡಿಸಿ ನಿರ್ಗಮಿತ ರಾಷ್ಟ್ರಪತಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ಆಪ್‌ ಮುಖಂಡರು ಮೋದಿಯವರು ಕೈ ಕಟ್ಟಿಕೊಂಡು ಕ್ಯಾಮರಾ ನೋಡುತ್ತಿರುವ ವೀಡಿಯೋವನ್ನು ಶೇರ್‌ ಮಾಡಿ ಟೀಕಿಸಿದ್ದರು. ಇದು ಪೋಸ್ಟ್‌ ಆದ ಒಂದು ಗಂಟೆಯಲ್ಲೇ ಟ್ವಿಟರ್ ಕೆಂಪು ಬಾವುಟವನ್ನು ಹಾಕಿದ್ದು “ಮಾಧ್ಯಮವನ್ನು ಸಂದರ್ಭಕ್ಕೆ ಮೀರಿ ದಾರಿತಪ್ಪಿಸುವ ಹಾಗೆ. ಪ್ರಸ್ತುತಪಡಿಸಲಾಗಿದೆ” ಎಂದು ಹೆಸರಿಸಿದೆ.

“ಐಸಾ ಅಪ್ಮಾನ್, ವೆರಿ ಸಾರಿ ಸರ್. ಯೇ ಲೋಗ್ ಐಸೇ ಹೈ ಹೈ. ಆಪ್ಕಾ ಕಾರ್ಯಾಲಯ ಖತಮ್, ಅಬ್ ಆಪ್ಕಿ ತರಫ್ ದೇಖೇಂಗೇ ಭೀ ನಹಿ (ಇಂತಹ ಅವಮಾನ ಕ್ಷಮಿಸಿ ಸರ್. ಈ ಜನರು ಹೀಗಿದ್ದಾರೆ, ನಿಮ್ಮ ಅವಧಿ ಮುಗಿದಿದೆ, ಈಗ ಅವರು ನಿಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. )” ಎಂದು ಕತ್ತರಿಸಿದ ವೀಡಿಯೊವನ್ನು ಲಗತ್ತಿಸಿ ಸಿಂಗ್ ಟ್ವೀಟ್ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!