spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

“ಮೂರು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ”: ಪಾಕ್‌ ಪ್ರಧಾನಿಗೆ ರಾಯಭಾರಿ ಕಚೇರಿಯಿಂದ ಟೀಕೆಯ ಸುರಿಮಳೆ

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದೆ. ಏಕೆಂದರೆ ಇದು ತಮ್ಮದೇ ಇಮ್ರಾನ್‌ಖಾನ್ ಸರ್ಕಾರದ ದಿವಾಳಿತನವನ್ನು ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಟೀಕಿಸಿದೆ.

ಹೌದು..ಸೆರ್ಬಿಯಾದ  ರಾಯಭಾರ ಕಚೇರಿ, ಖ್ಯಾತ ಗಾಐಕ ಸಾದ್ ಅಲವಿ’ ಅವರು ಹಾಡಿರುವ ‘ಆಪ್ ನೆ ಘಬ್ರಾನಾ ನಹೀ ಹೈ’ ಹಾಡಿಗೆ ಇಮ್ರಾನ್ ಖಾನ್ ಕಳೆದ ತಿಂಗಳು ” ದೇಶವನ್ನು ನಡೆಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿದ್ದ ಹೇಳಿಕೆಯನಿಟ್ಟುಕೊಂಡು ಲೇವಡಿ ಮಾಡಲಾಗಿದೆ.

ಈ ರಾಪ್‌ ಸಾಂಗ್‌ನ ಪೂರ್ತಿ  ಹಣದುಬ್ಬರಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರಿಗೆ ಟಾಂಗ್ ನೀಡಲಾಗಿದ್ದು, “ಇಮ್ರಾನ್‌ ಖಾನ್‌ರವರೇ ಹಿಂದಿನ ಎಲ್ಲಾ ಹಣದುಬ್ಬರ ದಾಖಲೆಗಳನ್ನು ಮುರಿದಿರುವ ನೀವು, ಕಳೆದ 3 ತಿಂಗಳಿಂದ ಸಂಬಳ ಪಡೆಯದೆ ನಿಮಗಾಗಿ ಕೆಲಸ ಮಾಡುತ್ತಿರುವ ನಾವು ಇನ್ನೆಷ್ಟು ಸಮಯ ಸುಮ್ಮನಿದ್ದು ಕೆಲಸ ಮಾಡುತ್ತೇವೆಂದು ನಿರೀಕ್ಷಿಸುತ್ತೀರಿ? ಶುಲ್ಕ ಕಟ್ಟದ ಕಾರಣ ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಗೆ ದಬ್ಬಿದ್ದಾರೆ. ಇದುವೆಯಾ #NayaPakistan” ಎಂದು ಪ್ರಶ್ನಿಸಿ ಇಮ್ರಾನ್‌ ಖಾನ್‌ ಅವರನ್ನು ಟ್ಯಾಗ್‌ ಮಾಡಲಾಗಿದೆ.

ಈ ಟ್ವೀಟ್‌ ಶೇರ್‌ ಆದ ಕೆಲವೇ ನಿಮಿಷಗಳಲ್ಲಿ ಇದನ್ನು ತೆಗೆದು ಹಾಕಲಾಗಿದೆ. ಆದರೆ ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಕೆಲವೆಡೆ ಸೆರ್ಬಿಯಾ ರಾಯಭಾರ ಕಚೇರಿಯ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದೆ ಎಂಬ ಶಂಕೆ ಕೂಡ ಕೇಳಿಬರುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss