ದೆಹಲಿ ಮೇಯರ್‌ ಆಯ್ಕೆ ಗೊಂದಲಕ್ಕೆ ತೆರೆ : ಮಹಾನಗರ ಪಾಲಿಕೆ ಮೇಯರ್‌ ಆಗಿ ಎಎಪಿಯ ಶೆಲ್ಲಿ ಒಬೆರಾಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದಿಲ್ಲಿಯ ಪೌರ ಚುನಾವಣೆಯ ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಂದು ಹೊಸ ಮೇಯರ್ ಆಯ್ಕೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಡಾ ಶೆಲ್ಲಿ ಒಬೆರಾಯ್ ಅವರು ರಾಷ್ಟ್ರ ರಾಜಧಾನಿಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಕಳೆದ ಎರಡು ತಿಂಗಳುಗಳಲ್ಲಿ ಮೂರು ಭಾರಿ ನಡೆದ ಗಲಾಟೆ, ಗದ್ದಲ ಮತ್ತು ಚುನಾವಣಾ ಗೊಂದಲಗಳಿಂದಾಗಿ ಮೇಯರ್ ಆಯ್ಕೆ ನಡೆದಿರಲಿಲ್ಲ. 75 ದಿನಗಳ ಬಳಿಕ ಇದೀಗ ಮೇಯರ್ ಆಯ್ಕೆ ನಡೆದಿದೆ.

ಎಎಪಿಯ ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆದರೆ, ಬಿಜೆಪಿಯ ಪರಾಜಿತ ಅಭ್ಯರ್ಥಿ ರೇಖಾ ಗುಪ್ತಾ 116 ಮತಗಳನ್ನು ಪಡೆದರು. ಒಟ್ಟು 266 ಮತಗಳು ಚಲಾವಣೆಯಾಗಿದ್ದವು. ಒಟ್ಟು 34 ಮತಗಳ ಅಂತರದಿಂದ ಮಣಿಸಿದ ಆಮ್ ಆದ್ಮಿ ಪಕ್ಷದ(ಎಎಪಿ) ಅಭ್ಯರ್ಥಿ ಶೆಲ್ಲಿ ಒಬೆರಾಯ್ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!