‘ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಸರ್ಕಾರ’ ಕಾಂಗ್ರೆಸ್ ವೈಫಲ್ಯದ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯ ಸರ್ಕಾರ 100 ದಿನಗಳನ್ನು ಪೂರೈಸಿದ್ದು, ಬಿಜೆಪಿ ಕಾಂಗ್ರೆಸ್ ಕರ್ಮಕಾಂಡಗಳ ಪಟ್ಟಿಯಿರುವ ವಿಡಿಯೋ ಬಿಡುಗಡೆ ಮಾಡಿ ವ್ಯಂಗ್ಯವಾಡಿತ್ತು.

ವಿಡಿಯೋ ನಂತರ ಇದೀಗ ಸಿದ್ದರಾಮಯ್ಯ ಸರ್ಕಾರದ 100 ವೈಫಲ್ಯಗಳನ್ನು ಹೆಸರಿಸಿರುವ ಚಾರ್ಜ್‌ಶೀಟ್ ಪುಸ್ತಕವನ್ನು ಬಿಜೆಪಿ ರಿಲೀಸ್ ಮಾಡಿದೆ.

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಆಡಳಿತ ಎಂದು ಪುಸ್ತಕಕ್ಕೆ ಹೆಸರಿಡಲಾಗಿದೆ.

ನೂರು ದಿನದಲ್ಲಿ ನೂರು ರೀತಿ ದ್ರೋಹವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ನಮ್ಮ ಸರ್ಕಾರದಲ್ಲಿ ಯಾರಿಗೂ ಅನ್ಯಾಯ ಆಗದಂತೆ ನೋಡಿದ್ದೆವು. ಆದರೆ ಇಲ್ಲಿ ಎಲ್ಲವೂ ಮಿತಿಮೀರಿಗೆ ಭ್ರಷ್ಟರನ್ನು ಪೋಷಿಸುವ ಸರ್ಕಾರ ಇದು ಎಂದು ನಳಿನ್ ಕುಮಾರ್ ಹೇಳಿದ್ದಾರೆ.

ದಿಕ್ಕುತಪ್ಪಿದ ಸರ್ಕಾರದ ಬಗ್ಗೆ ಎಷ್ಟೂ ಎಂದು ಹೇಳುವುದು, ಈ ಸರ್ಕಾರದಲ್ಲಿಯೇ ಸಾಕಷ್ಟು ಗೊಂದಲ ಇದೆ. ನಾಡಿನ ಜನರಿಗೆ ಸಾವಿರ ಮಾತು ಕೊಟ್ಟಿದ್ದಾರೆ, ಆದರೆ ತೀರಿಸಿಲ್ಲ. ತೀರಿಸುವುದೂ ಇಲ್ಲ. ಹಣಕಾಸಿನ ವಿಚಾರದಲ್ಲಿ ಯಾವ ಲೆಕ್ಕವೂ ಇಲ್ಲದಂತಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!