ಅವಿವಾ ಬಿದ್ದಪ್ಪ ಜತೆ ನಾಳೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.
ಅಭಿಮಾನಿಗಳಿಗೆ ಸುಮಲತಾ ಅಂಬರೀಷ್ ಸಿಹಿ ಸುದ್ದಿ ನೀಡಿದ್ದು, ನಾಳೆ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಿದ್ದಾರೆ.

ಈಗಾಗಲೇ ನಿಶ್ಚಿತಾರ್ಥಕ್ಕೆ ಎಲ್ಲ ತಯಾರಿಯಾಗಿದ್ದು, ಅಂಬರೀಷ್-ಸುಮಲತಾ ವಾರ್ಷಿಕೋತ್ಸವ ದಿನದಂದೇ ಉಂಗುರ ಪೂಜೆ ಮಾಡಲಾಗಿದೆ. ಹಲವು ದಿನಗಳಿಂದ ಎಂಗೇಜ್‌ಮೆಂಟ್ ಬಗ್ಗೆ ಗುಸುಗುಸು ಎದ್ದಿದ್ದು,ಈ ವಿಷಯ ಹೌದು ಎಂದು ಸುಮಲತಾ ಹೇಳಿದ್ದಾರೆ.

ಖಾಸಗಿ ಹೋಟೆಲ್ ಒಂದರಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಅಭಿಷೇಕ್ ಹಾಗೂ ಅವಿವಾ ಮೊದಲು ಭೇಟಿಯಾದ ಹೊಟೇಲ್‌ನಲ್ಲೇ ನಿಶ್ಚಿತಾರ್ಥ ನಡೆಯಲಿದೆ. ಸಂಕ್ರಾಂತಿ ನಂತರ ಮದುವೆ ದಿನಾಂಕ ಘೋಷಿಸಲಾಗುವುದು. ಸ್ಯಾಂಡಲ್‌ವುಡ್‌ನ ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!