ಕಾವೇರಿ ಪ್ರಾಧಿಕಾರ, ನೀರು ನಿರ್ವಹಣ ಮಂಡಳಿ ರದ್ದುಪಡಿಸಿ: ಕಾವೇರಿ ಕ್ರಿಯಾ ಸಮಿತಿ ಆಗ್ರಹ

ಹೊಸದಿಗಂತ ವರದಿ,ಮೈಸೂರು:

ಕಾವೇರಿ ನೀರಿನ ಹಂಚಿಕೆಯ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಾ, ತಮಿಳುನಾಡಿನ ಏಜೆಂಟ್‌ನoತೆ ಕೆಲಸ ಮಾಡುತ್ತಿರುವ ಕಾವೇರಿ ಪ್ರಾಧಿಕಾರ, ಕಾವೇರಿ ನೀರು ನಿರ್ವಹಣ ಮಂಡಳಿಯನ್ನು ಕೂಡಲೇ ರದ್ದುಪಡಿಸಿ, ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕೆಂದು ಆಗ್ರಹಿಸಿ ಕಾವೇರಿ ಕ್ರಿಯಾ ಸಮಿತಿಯಿಂದ ಭಾನುವಾರವೂ ಪ್ರತಿಭಟನಾ ಧರಣಿ ನಡೆಯಿತು.

ಈ ಧರಣಿ ಸತ್ಯಾಗ್ರಹದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದವರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಸಂಘದ ಮುಖಂಡ ತೇಜೇಶ್ ಲೋಕೇಶ್ ಗೌಡ, ಇನ್ನಾದರೂ ನಮ್ಮ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಿದ್ದರಾಮಯ್ಯ ರವರಿಗೆ ನೀವು ನಮಗೆ ನೀರು ಬಿಡುವುದನ್ನು ನಿಲ್ಲಿಸಿದರೆ, ನಾವು ಇಂಡಿಯಾ ಮೈತ್ರಿ ಕೂಟದಿಂದ ಹೊರಹೋಗುತ್ತೇವೆಂದು ಎಚ್ಚರಿಕೆ ನೀಡಿ, ನಮಗೆ ನಮ್ಮ ತಮಿಳುನಾಡಿನ ರೈತರ ಹಿತಾಸಕ್ತಿ ಮುಖ್ಯ ಎಂದಿದ್ದಾರೆ. ಈ ರೀತಿ ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಏಕೆ ನಮ್ಮ ರೈತರ ಪರವಾಗಿಲ್ಲ. ಇದು ನಿಜಕ್ಕೂ ಖಂಡನೀಯ. ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಸ್ಥಿಕೆ ವಹಿಸಿ ನಮಗೆ ಶಾಶ್ವತ ಪರಿಹಾರ ನೀಡಬೇಕು. ನೀರಿದ್ದಾಗ ಮಾತ್ರ ನೀರು ಬಿಡಲು ಸೂತ್ರ ರಚಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ (ಜೆಪಿ) ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್, ಮೂಗೂರು ನಂಜುoಡಸ್ವಾಮಿ, ಮೋಹನ್ ಕುಮಾರ್ ಗೌಡ, ಸುರೇಶ್ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕಾರ್ಯಾಧ್ಯಕ್ಷೆ ಸುಮಿತ್ರಾ ರಮೇಶ್, ಶಿವಲಿಂಗಯ್ಯ, ಮಂಡ್ಯ ಅಧ್ಯಕ್ಷೆ ಸುಜಾತ, ಸುರೇಶ್ ಗೋಲ್ಡ್, ದುರ್ಗಮ್ಮ, ವಿಜಯೇಂದ್ರ, ಕೃಷ್ಣಯ್ಯ, ನಳಿನಿ, ಡಾ. ನರಸಿಂಹೇ ಗೌಡ, ಹನುಮಂತಯ್ಯ, ಪುಷ್ಪವತಿ, ಶುಭಶ್ರೀ, ಮಂಜುಳ, ಹನುಮಂತೇಶ್, ಸೋಮೇಗೌಡ, ಹೇಮಂತ್, ಪ್ರಭಾಕರ್, ಮಹಾದೇವ ಆರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!