ಕೇಂದ್ರೀಯ ವಿದ್ಯಾಲಯಗಳ ಎಂಪಿ ಕೋಟಾ ರದ್ದು: ಹೊಸ ಕೋಟಾಗಳ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇನ್ನು ಮುಂದೆ ಕೇಂದ್ರೀಯ ವಿದ್ಯಾಲಯಗಳಲ್ಲಿನ ಎಂಪಿ(ಸಂಸದರ) ಕೋಟಾವನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಸೋಮವಾರ ಪರಿಷ್ಕೃತ ಪ್ರವೇಶ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು ಕೇಂದ್ರೀಯ ವಿದ್ಯಾಲಯಗಳಲ್ಲಿ ವಿವೇಚನಾಯುಕ್ತ ಸಂಸತ್ ಸದಸ್ಯ (ಎಂಪಿ) ಕೋಟಾದ ಅಡಿಯಲ್ಲಿ ಪ್ರವೇಶಪಡೆಯುವುದನ್ನು ರದ್ದು ಮಾಡಲಾಗಿದೆ.

ವಿಶೇಷ ವಿತರಣಾ ಪ್ರವೇಶ ಯೋಜನೆ ಅಥವಾ ಸಂಸದ ಕೋಟಾದ ಅಡಿಯಲ್ಲಿ, ಸಂಸತ್ತಿನ ಸದಸ್ಯರು 1 ರಿಂದ 9 ನೇ ತರಗತಿಗಳಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ ತಮ್ಮ ಕ್ಷೇತ್ರಗಳಿಂದ ಗರಿಷ್ಠ 10 ವಿದ್ಯಾರ್ಥಿಗಳನ್ನು ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದ್ದರು. ಈ ಕೋಟಾದಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಇಲ್ಲವೇ ಕೋಟಾವನ್ನು ರದ್ದು ಪಡಿಸಬೇಕು ಎಂದು ಹಲವು ಸಂಸದರು ಬೇಡಿಕೆ ಇಟ್ಟಿದ್ದರು.

ಈ ಕುರಿತು ಪರಿಷ್ಕೃತ ಮಾರ್ಗಸೂಚಿಯು ಹೊರಬಿದ್ದಿದ್ದು ಸಂಸದರ ಕೋಟಾದೊಂದಿಗೆ ಶಿಕ್ಷಣ ಸಚಿವಾಲಯದ ನೌಕರರ ಮಕ್ಕಳು, ಸಂಸದರ ಮಕ್ಕಳು ಮತ್ತು ಅವಲಂಬಿತ ಮೊಮ್ಮಕ್ಕಳು, ನಿವೃತ್ತ ಕೆವಿ ನೌಕರರು ಮತ್ತು ಶಾಲಾ ಆಡಳಿತ ಸಮಿತಿ ಕೋಟಾ, ಅಧ್ಯಕ್ಷರ ವಿವೇಚನಾ ಕೋಟಾ ಸೇರಿದಂತೆ ಇತರ ಮೀಸಲಾತಿಗಳನ್ನು ತೆಗೆದುಹಾಕಲಾಗಿದೆ.

ಇವುಗಳ ಜಾಗದಲ್ಲಿ ಸಿಆರ್‌ಪಿಎಫ್‌, ಬಿಎಸ್‌ಎಫ್‌,ಐಟಿಬಿಪಿ, ಎಸ್‌ ಎಸ್‌ ಬಿ, ಸಿಐಎಸ್‌ಎಫ್‌,ಎನ್‌ಡಿಆರ್‌ಎಫ್‌ ಮತ್ತು ಅಸ್ಸಾಂ ರೈಫಲ್ಸ್‌ ಸೇರಿದಂತೆ ಕೇಂದ್ರೀಯ ರಕ್ಷಣಾ ಪಡೆಗಳಲ್ಲಿರುವ ವಾರ್ಡ್‌ಗಳಿಗಾಗಿ ಮೀಸಲಿಡಲಾಗಿದ, ಜೊತೆಗೆ ಪಿಎಂ ಕೇರ್ಸ್ ಒಳಗೊಂಡಿರುವ ಮಕ್ಕಳಿಗೆ ಕೋಟಾ ನೀಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!