Wednesday, August 17, 2022

Latest Posts

ಪಂಜ್ಶೀರ್ ಪಡೆಯಲು ಹೋರಾಟ: 600 ತಾಲಿಬಾನಿಗಳ ಹತ್ಯೆ, ಸಾವಿರಕ್ಕೂ ಹೆಚ್ಚು ಉಗ್ರರು ವಶಕ್ಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ಥಾನದ ಈಶಾನ್ಯ ಪ್ರಾಂತ್ಯವಾದ ಪಂಜ್ಶೀರ್ ನಲ್ಲಿ 600 ತಾಲಿಬಾನಿಗಳನ್ನು ಪ್ರತಿರೋಧ ಪಡೆಗಳು ಹೊಡೆದುರುಳಿಸಿವೆ. ಪಂಜ್ಶೀರ್ ಇಸ್ಲಾಮಿಕ್ ಗುಂಪಿನ ವಿರುದ್ಧ ಹಿಡಿತ ಹೊಂದಿರುವ ಕೊನೆಯ ಆಫ್ಘನ್ ಪ್ರಾಂತ್ಯವಾಗಿದೆ ಎಂದು ಪ್ರತಿರೋಧ ಪಡೆ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರತಿರೋಧ ಪಡೆಗಳ ವಕ್ತಾರ ಫಾಹಿಮ್ ದಶ್ತಿ, ಮುಂಜಾನೆಯಿಂದಲೇ ಪಂಜ್ಶೀರ್ ನ ಹಲವು ಜಿಲ್ಲೆಗಳಲ್ಲಿ ತಾಲಿಬಾನ್ ವಿರುದ್ಧ ದಾಳಿ ನಡೆಯುತ್ತಿದ್ದು, ಸುಮಾರು 600 ತಾಲಿಬಾನ್ ಉಗ್ರರನ್ನು ಸದೆಬಡೆಯಲಾಗಿದೆ. ಈ ವೇಳೆ 1000ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಆ.31ರಂದು ಇಡೀ ಅಮೆರಿಕ ಸೇನೆಯನ್ನು ವಾಪಸ್ ಕಳುಹಿಸಿದ ಬಳಿಕ ಇಡೀ ಅಫ್ಘಾನಿಸ್ಥಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ. ಪಂಜ್ಶಿರ್ ಗಾಗಿ ತಾಲಿಬಾನ್ ಹೋರಾಟ ನಡೆಸುತ್ತಿದ್ದು, ಪ್ರಾಂತ್ಯದ ಏಳು ಜಿಲ್ಲೆಗಳಲ್ಲಿ ನಾಲ್ಕು ಜಿಲ್ಲೆ ತಾಲಿಬಾನ್ ಪಡೆಗಳ ನಿಯಂತ್ರಣದಲ್ಲಿದೆ ತರಲಾಗಿದೆ ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!