ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್-19 ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ಮುಖಂಡರ ದೂರಿನ ಅನ್ವಯ ನಟಿ ಆಯಿಷಾ ಸುಲ್ತಾನ್ ವಿರುದ್ಧ ಲಕ್ಷದ್ವೀಪ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ನೀಡಿದ ದೂರಿನ ಅನ್ವಯ ಲಕ್ಷದ್ವೀಪದ ಚೆತಿಯಾತ್ ದ್ವೀಪ ನಿವಾಸಿ ಆಯೆಷಾ ಸುಲ್ತಾನಾ ವಿರುದ್ಧ ದೂರು ದಾಖಲಿಸಿದ ಕವರತ್ತಿ ಪೊಲೀಸರು, ಎಫ್ಐಆರ್ ಅನ್ವಯ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಲಯಾಳಂ ಟಿ.ವಿ ಚಾನೆಲ್ನಲ್ಲಿ ನಡೆದ ಚರ್ಚೆಯ ವೇಳೆ ಲಕ್ಷದ್ವೀಪದಲ್ಲಿ ಕೋವಿಡ್-19 ಹರಡಲು ಕೇಂದ್ರ ಸರ್ಕಾರವು ಜೈವಿಕ ಅಸ್ತ್ರಗಳನ್ನು ಬಳಸಿದೆ ಎಂದು ಆಯಿಷಾ ಆರೋಪಿಸಿದ್ದರು ಎನ್ನಲಾಗಿದೆ.
ಆಯೆಷಾ ಸುಲ್ತಾನಾ ದೇಶ ವಿರೋಧಿ ಕೃತ್ಯ ಎಸಗಿದ್ದಾರೆಂದು ಬಿಜೆಪಿ ಮುಖಂಡರ ದೂರಿನಲ್ಲಿ ಆರೋಪಿಸಲಾಗಿದ್ದು, ಇದು ಕೇಂದ್ರ ಸರ್ಕಾರಕ್ಕೆ ಕಳಂಕ ತಂದಿದೆ ಎಂದು ದೂರಿದ್ದಾರೆ.
ಲಕ್ಷದ್ವೀಪದಲ್ಲಿ ಕೊರೋನಾ ಪ್ರಕರಣಗಳು ಶೂನ್ಯವಾಗಿದ್ದವು. ಆದರೆ ಈಗ ಪ್ರತಿದಿನ 100 ಪ್ರಕರಣಗಳು ಹೆಚ್ಚಿಸುತ್ತಿದೆ ಎಂದು ಚರ್ಚೆಯಲ್ಲಿ ಹೇಳಿದ್ದರು.
ಆಯಿಷಾ ಸುಲ್ತಾನ ಮಾಡೆಲ್, ನಟ ಮತ್ತು ನಿರ್ದೇಶಕಿ. ಲಕ್ಷದ್ವೀಪದ ಇತಿಹಾಸದಲ್ಲೇ ಈಕೆ ಮೊದಲ ಮಹಿಳಾ ಚಲನಚಿತ್ರ ನಿರ್ಮಾಪಕಿ. ಮಾಧ್ಯಮ ವರದಿಗಳ ಪ್ರಕಾರ, ಮಲಯಾಳಂ ಭಾಷೆಯ ಚಿತ್ರ ಫ್ಲಶ್ 2020ರಲ್ಲಿ ಸ್ವತಂತ್ರ ನಿರ್ದೇಶಕರಾಗಿ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. ಲಾಲ್ ಜೋಸ್ ಸೇರಿದಂತೆ ಅನೇಕ ಮಲಯಾಳಂ ಚಲನಚಿತ್ರ ನಿರ್ಮಾಪಕರೊಂದಿಗೆ ಸುಲ್ತಾನ ಕೆಲಸ ಮಾಡಿದ್ದಾರೆ.