Monday, August 8, 2022

Latest Posts

ಜುಲೈ 15ರಿಂದ 2021-22ನೇ ಶೈಕ್ಷಣಿಕ ವರ್ಷ ಆರಂಭ: ಶಿಕ್ಷಣ ಸಚಿವ ಸುರೇಶ್​​ ಕುಮಾರ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜುಲೈ 15ರಿಂದ 2021-22ನೇ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್​​ ಕುಮಾರ್ ಹೇಳಿದ್ದಾರೆ.
ಧಾರವಾಡದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 5ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುತ್ತವೆ.‌ ಹೀಗಾಗಿ ಜುಲೈ 15ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸುತ್ತೇವೆ ಎಂದರು.
ಇನ್ನು 1ರಿಂದ 5ನೇ ತರಗತಿ ಆರಂಭ ಮಾಡುವ ವಿಚಾರಕ್ಕೆ ಸಂಬಂಧಿಸಿ ಇನ್ನೊಂದು ವಾರ ತಡೆದು ತೀರ್ಮಾನ ಮಾಡುತ್ತೇವೆ. ಸಾಕಷ್ಟು ಜನ ತರಗತಿ ಆರಂಭಿಸಿ ಅಂತಾ ಕೇಳುತ್ತಿದ್ದಾರೆ. ನಾವೂ ಕೂಡ ಎಲ್ಲ ತಯಾರಿ ನಡೆಸಿದ್ವಿ ,ಎಲ್ಲ ಸರಿ ಇದ್ದಿದ್ರೆ ಇವತ್ತಿನಿಂದಲೇ ಆರಂಭಿಸಬಹುದಿತ್ತು. ಆದರೆ ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲಿ 300 ನಿತ್ಯದ ಇದ್ದ ಕೇಸ್ ಇದ್ದು, ಈಗ 500 ದಾಟಿದೆ. ಹೀಗಾಗಿ ಇನ್ನೊಂದು ವಾರ ಕಾದು ನೋಡುತ್ತೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss