Tuesday, July 5, 2022

Latest Posts

ಲಂಚ ಪಡೆದ ಪ್ರಕರಣದಲ್ಲಿ ಸಸ್ಪೆಂಡ್ ಆದ ಬೆನ್ನಲ್ಲೇ ಎಎಸ್​ಐ ಮನೆಗೆ ಎಸಿಬಿ ದಾಳಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಲಂಚ ಪಡೆದ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಎಎಸ್​ಐ ದಯಾನಂದಸ್ವಾಮಿ ಅವರ ಮನೆಯ ಮೇಲೆ ಮಂಗಳವಾರದಂದು ಎಸಿಬಿ ದಾಳಿ ನಡೆದಿದೆ.
ಯಲಹಂಕ ನ್ಯೂ ಟೌನ್​ನಲ್ಲಿರುವ ಕೊಡಿಗೇಹಳ್ಳಿ ಎಎಸ್‌ಐ ದಯಾನಂದ್ ಅವರ ಮನೆಯ ಮೇಲೆ ಎಸಿಬಿ ದಾಳಿಯಾಗಿದ್ದು, ಈಗಾಗಲೇ ಅವರ ಮೇಲೆ ಉದ್ಯಮಿಯೊಬ್ಬರಿಂದ ಲಂಚ ಪಡೆದಿರುವ ಆರೋಪವಿದ್ದು, ಅದು ನಿನ್ನೆಯಷ್ಟೇ ಸಾಬೀತಾಗಿತ್ತು. ತಕ್ಷಣ ಕಮಿಷನರ್​ ದಯಾನಂದ್​ನನ್ನು ಕೆಲಸದಿಂದ ಅಮಾನತು ಮಾಡಿ ಎಸಿಬಿ ತನಿಖೆಗೆ ಆದೇಶಿಸಿದ್ದರು. ಆದೇಶ ಹಿನ್ನಲೆಯಲ್ಲಿ 15 ಅಧಿಕಾರಿಗಳ ತಂಡದಿಂದ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು ಎಸಿಬಿ ಎಸ್.ಪಿ ಯತೀಶ್ ಚಂದ್ರ ನೇತೃತ್ವದಲ್ಲಿ ದಯಾನಂದ್​ ಮನೆ ಮೇಲೆ ದಾಳಿ ನಡೆಸಲಾಗಿದೆ. ಮಧ್ಯಾಹ್ನ 2 ಘಂಟೆಯಿಂದ ಮನೆಯಲ್ಲಿರುವ ಎಲ್ಲ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss