Monday, July 4, 2022

Latest Posts

ಲಂಚ ಸ್ವೀಕಾರ ಆರೋಪ ಸಾಬೀತು: ಶಾಲಾ ವಾರ್ಡ್ ಗೆ 3 ವರ್ಷ ಜೈಲು ಶಿಕ್ಷೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ವರದಿ, ಮೈಸೂರು:

ಹಾಸ್ಟೆಲ್‌ಗೆ ಇಲೆಕ್ಟ್ರಾನಿಕ್ ಉಪಕರಣ ರಿಪೇರಿ ಶುಲ್ಕ ನೀಡಲು ಲಂಚ ಸ್ವೀಕರಿಸಿದ ಪ್ರಕರಣವೊಂದರಲ್ಲಿ ಶಾಲಾ ವಾರ್ಡನ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ಮೈಸೂರಿನ 3ನೇ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆರಾಲ್ಡ್ ಆರ್ ಮೆಂಡೋನ್ಸ್ ವಿಧಿಸಿದ್ದಾರೆ.
ಗಣಪತಿ ಜಕಾತಿ ಎಂಬುವರೇ ಶಿಕ್ಷೆಗೆ ಒಳಗಾದವರು. ನಂಜನಗೂಡು ತಾಲ್ಲೂಕಿನ ಗೋಳೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್‌ಗೆ ಇಲೆಕ್ಟ್ರಾನಿಕ್ ಉಪಕರಣ ರಿಪೇರಿ ಶುಲ್ಕ ನೀಡಲು ವ್ಯಕ್ತಿಯೊಬ್ಬರಿಂದ ವಾರ್ಡನ್ ಗಣಪತಿ ಜಕಾತಿ ಲಂಚ ಕೇಳಿದ್ದರು. ಆ ಸಂಬAಧ 2 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
ಸರ್ಕಾರಿ ವಿಶೇಷ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ಅವರು ವಾರ್ಡನ್ ವಿರುದ್ಧ ವಾದ ಮಂಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss