spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಕೊಡಗಿನ ವ್ಯಕ್ತಿ ಸಾವು

- Advertisement -Nitte

ಹೊಸದಿಗಂತ ವರದಿ, ಕುಶಾಲನಗರ:

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾದ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಂತೇನಹಳ್ಳಿಯಲ್ಲಿ‌ ನಡೆದಿದೆ.
ಮೃತರನ್ನು ಇಲ್ಲಿಗೆ ಸಮೀಪದ ದೊಡ್ಡತ್ತೂರು ಗ್ರಾಮದ ನಿವಾಸಿ ರಾಜಮ್ಮ ಎಂಬವರ ಪುತ್ರ ಗಣೇಶ್ (35)ಎಂದು ಗುರುತಿಸಲಾಗಿದೆ.
ಗಣೇಶ್ ತನ್ನ ಕೆಎ12ಆರ್4022ರ ಬೈಕ್‌ನಲ್ಲಿ ಪಿರಿಯಾಪಟ್ಟಣದಿಂದ ಕುಶಾಲನಗರದ ಕಡೆಗೆ ಬರುವ ಸಂದರ್ಭ, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಂತೇನಹಳ್ಳಿ ಗ್ರಾಮದ ಹತ್ತಿರ ರಿಪೇರಿಯಾಗಿ ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮವಾಗಿ ಬೈಕ್ ಸವಾರ ಗಣೇಶ್ ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಗಣೇಶ್ ಪತ್ನಿ ಮತ್ತು 4 ವರ್ಷದ ಮಗುವನ್ನು ಅಗಲಿದ್ದು,‌ ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss