ಸಿನಿಮಾ ಶೂಟಿಂಗ್ ವೇಳೆ ಅವಘಡ: ನಟಿ ರಾಗಿಣಿ ಕೈಗೆ ಗಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಪ್ಪದ ಬೆಡಗಿ ಖ್ಯಾತಿಯ ರಾಗಿಣಿ ದ್ವಿವೇದಿ ಅಭಿನಯದ ʻಕಮಾಂಡೋʼ ಸಿನಿಮಾದ ಶೂಟಿಂಗ್ ವೇಳೆ ಅವಗಢವೊಂದು ಸಂಭವಿಸಿದ್ದು, ರಾಗಿಣಿ ಕೈಗೆ ಪೆಟ್ಟಾಗಿದೆ.

ಹಲವು ವರ್ಷಗಳ ಬಳಿಕ ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ ಆಕ್ಟೀವ್ ಆಗಿದ್ದಾರೆ. ಚೆನ್ನೈನಲ್ಲಿ ರಾಗಿಣಿ ನಟನೆಯ ಸಿನಿಮಾವೊಂದರಲ್ಲಿ ಚಿತ್ರೀಕರಣದ ವೇಳೆಯಲ್ಲಿ ಕೈಗೆ ಬಲವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಸೂಕ್ತ ಚಿಕಿತ್ಸೆ ಕೂಡ ನೀಡಲಾಗಿದೆ.

ಸದ್ಯ ಆರೋಗ್ಯದಲ್ಲಿ ಚೇತರಿಕೆಯಿದೆ. ಇದೀಗ ನಾಲ್ಕು ದಿನಗಳ ಕಾಲ ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾರೆ. ಆದಷ್ಟು ಬೇಗ ಹುಷಾರಾಗಿ, ಚಿತ್ರತಂಡ ಸೇರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ರಾಗಿಣಿ ತಿಳಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!