ಶೂಟಿಂಗ್ ವೇಳೆ ಅವಘಡ: ನಟಿ ಸಮಂತಾಗೆ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ಅಪರೂಪದ ಕಾಯಿಲೆ Myositisನಿಂದ ಬಳಲುತ್ತಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮತ್ತೆ ಇದೀಗ ಶೂಟಿಂಗ್‌ಗೆ ಮರಳಿದ್ದಾರೆ.

ಸದ್ಯ ಸಮಂತಾ ಮುಂಬೈನಲ್ಲಿದ್ದಾರೆ. ಇಂಗ್ಲಿಷ್​ನ ‘ಸಿಟಾಡೆಲ್​’ ಸೀರಿಸ್‌ನ ಭಾರತೀಯ ವರ್ಷನ್​ ಸಿಟಾಡೆಲ್ ಶೂಟಿಂಗ್​ನಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. ಈ ನಡುವೆ ಸಮಂತಾ ರಕ್ತ ಸೋರುತ್ತಿರುವ ಕೈಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಸಮಂತಾ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಅಷ್ಟಕ್ಕೂ ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯವಾಗಿದೆ. ಗಾಯವಾಗಿರುವ ಕೊಗಳ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದಾರೆ. ಸಿಟಾಡೆಲ್ ವೆಬ್ ಸೀರಿಸ್ ಚಿತ್ರೀಕರಣ ವೇಳೆ ಗಾಯವಾಗಿದೆ ಎನ್ನಲಾಗಿದೆ.

ನಟಿ ಸಮಂತಾ ಬಾಲಿವುಡ್ ವರುಣ್ ಧವನ್ ಜೊತೆ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್​ನ ಜನಪ್ರಿಯ ಸೀರಿಸ್ ‘ಸಿಟಾಡೆಲ್’​​ ಭಾರತದ ವರ್ಷನ್‌ನಲ್ಲಿ ಮೂಡಿಬರುತ್ತಿದೆ. ವಿಶೇಷ ಎಂದರೆ ಈ ಸೀರಿಸ್‌ಗೆ ‘ದಿ ಫ್ಯಾಮಿಲಿ ಮ್ಯಾನ್​’ ಸೀರಿಸ್ ಖ್ಯಾತಿಯ ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಈಗ ಆರಂಭ ಆಗಿದ್ದು ಸಮಂತಾ ಮತ್ತು ವರುಣ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!