ಕಚ್ಚಾ ಬಾದಾಮ್ ಖ್ಯಾತಿಯ ಬುಬನ್ ಬಡ್ಯಾಕರ್‌ಗೆ ಅಪಘಾತ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಚ್ಚಾಬಾದಾಮ್ ಹಾಡಿನ ಮೂಲಕ ಸೆನ್ಸೇಶನ್ ಸೃಷ್ಟಿಸಿದ್ದ ಗಾಯಕ ಬುಬನ್ ಬಡ್ಯಾಕರ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಬನ್ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಿದ್ದು, ಅದನ್ನು ಕಲಿಯುವಾಗ ಅಪಘಾತಕ್ಕೀಡಾಗಿದ್ದು, ಎದೆ ಭಾಗಕ್ಕೆ ಪೆಟ್ಟಾಗಿದೆ. ಸುರಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡಲೆಕಾಯಿ ಮಾರಲು ಹಾಡು ಹೇಳುತ್ತಾ ಇದ್ದ ಬುಬನ್ ಗೀತೆ ರಾತ್ರೋ ರಾತ್ರಿ ಫೇಮಸ್ ಆಗಿತ್ತು. ಇನ್ಸಟಾಗ್ರಾಂ ರೀಲ್ಸ್‌ನಲ್ಲಿ ರಿಮಿಕ್ಸ್ ಕೂಡ ಮಾಡಲಾಗಿತ್ತು. ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ಈ ವಿಡಿಯೋ ೫೦ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!