Wednesday, August 10, 2022

Latest Posts

ಆಕಸ್ಮಿಕ ಬೆಂಕಿ: ಸಿದ್ದಿ ಕುಟುಂಬದ ಮನೆ ಸಂಪೂರ್ಣ ಸುಟ್ಟು ಕರಕಲು

ಹೊಸ ದಿಗಂತ ವರದಿ, ಅಂಕೋಲಾ:

ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತದಿಂದಾಗಿ ಹಿಂದುಳಿದ ಬಡ ಸಿದ್ಧಿ ಕುಟುಂಬ ವಾಸಿಸುತ್ತಿರುವ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿ ಗ್ರಾಮದ ಮತ್ತಿಘಟ್ಟದಲ್ಲಿ ಸಂಭವಿಸಿದ್ದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಎಲ್ಲವನ್ನೂ ಕಳೆದು ಕೊಂಡು ಕಂಗಾಲಾಗಿರುವ ಕುಟುಂಬಕ್ಕೆ ವೈಯಕ್ತಿಕವಾಗಿ ಮಾನವೀಯ ಸಹಾಯ ನೀಡುವ ಮೂಲಕ ಧೈರ್ಯ ತುಂಬಿದ್ದಾರೆ.
ಮತ್ತಿಘಟ್ಟಾದ ನಿವಾಸಿ ಕಮಲಾ ಫಕೀರ ಸಿದ್ಧಿ ಎನ್ನುವವರ ಮನೆಗೆ ಬುಧವಾರ ರಾತ್ರಿ ಬೆಂಕಿ ತಗುಲಿ ಮನೆ ಹಾಗೂ ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳು ಸುಟ್ಟು ಹೋಗಿದ್ದವು, ತೊಡಲು ಸರಿಯಾದ ಬಟ್ಟೆ ಸಹ ಇಲ್ಲದ ಸ್ಥಿತಿಯಲ್ಲಿ ಇದ್ದರು.
ವಿಷಯ ತಿಳಿದ ಶಾಸಕಿ ರೂಪಾಲಿ ನಾಯ್ಕ ಅವರು ಶೀಘ್ರವಾಗಿ ಸ್ಪಂದಿಸಿ ಕುಟುಂಬಕ್ಕೆ ದಿನಬಳಕೆಯ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಸಹಾಯ ಮಾಡಿದ್ದು ತುರ್ತು ಆರ್ಥಿಕ ಸಹಾಯವನ್ನೂ ನೀಡಿರುವುದಾಗಿ ತಿಳಿದು ಬಂದಿದೆ.
ಶಾಸಕಿ ರೂಪಾಲಿ ನಾಯ್ಕ ಅವರ ಜನಪರ ಸ್ಪಂದನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss