Sunday, April 18, 2021

Latest Posts

ಎರಡು ಬಸ್ ಗಳ ನಡುವೆ ಡಿಕ್ಕಿ: 16 ಮಂದಿ ಸಾವು, 14 ಜನ ಗಂಭೀರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಎರಡು ಬಸ್ ಗಳ ನಡುವೆ ಡಿಕ್ಕಿ ಆದ ಪರಿಣಾಮ 16 ಮಂದಿ ಮೃತಪಟ್ಟಿದ್ದು, 14 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಮೆಕ್ಸಿಕೊದ ಸೊನೊರಾ ರಾಜ್ಯದಲ್ಲಿ ನಡೆದಿದೆ.

ನೊಚೆ ಬ್ಯೂನಾ ಗಣಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಮತ್ತೊಂದು ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟ 16 ಮಂದಿ ಮೆಕ್ಸಿಕನ್ ಪ್ರಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ 14 ಮಂದಿ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss