ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಚಿನ್ನ ಕದ್ದ ಕದ್ದ ಆರೋಪಿಗಳು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಜೆಡಿಎಸ್ ಪರಿಷತ್ ಸದಸ್ಯ ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಬಂಧಿಸಿರುವ ಪೊಲೀಸರು 63 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ 15 ದಿನಗಳ ಹಿಂದೆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ್ ಎಂಬಾತನ ಕೈಗೆ ಒಂದೂವರೆ ಕೆಜಿ ಚಿನ್ನ ಕೊಟ್ಟು ಹಾಲ್ ಮಾರ್ಕ್ ಹಾಕಿಸಿಕೊಂಡು ಬರೋದಕ್ಕೆ ಕಳುಹಿಸಲಾಗಿತ್ತು. ಆದರೇ ಆ ಚಿನ್ನದೊಂದಿಗೆ ಮೌನೇಶ್ ರಾಜಸ್ಥಾನಕ್ಕೆ ಪರಾರಿಯಾಗಿದ್ದನು. ಈ ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಸ್ನೇಹಿತ ಮಹಾವೀರ್ ಮನೆಯಲ್ಲಿ ಮಾರಾಟ ಮಾಡಲು ಆಗದೇ ಇರಿಸಿದ್ದನು. ಆದರೇ ಮಹಾವೀರ್ ಎರಡು ದಿನಗಳ ಬಳಿಕ ಮೌನೇಶ್ ಗೆ ಕರೆ ಮಾಡಿ ನನ್ನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾರೆ ಅಂತ ಕತೆ ಹೇಳಿದ್ದಾನೆ. ಇತ್ತ ಹಲಸೂರು ಗೇಟ್ ಪೊಲೀಸರು ರಾಜಸ್ಥಾನಕ್ಕೆ ತೆರಳಿ ಆರೋಪಿ ಮೌನೇಶ್ ಬಂಧಿಸಿ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ತನ್ನ ಸ್ನೇಹಿತ ಮೌನೇಶ್ ಮನೆಯಲ್ಲಿ ಇರಿಸಿದ್ದು, ಆತ ಕತೆ ಕಟ್ಟಿ ಹೇಳಿದ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾನೆ. ಆ ಬಳಿಕ ಮೌನೇಶ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಂದೂವರೆ ಕೆಜಿ ಚಿನ್ನಾಭರಣದಲ್ಲಿ 750 ಗ್ರಾಂ ಉಳಿಸಿ, ಉಳಿದದ್ದು ಜಮೀನಿನ ಮೇಲೆ ಹಾಕಿದ ವಿಷಯವನ್ನು ತಿಳಿಸಿದ್ದಾನೆ.

ಕೊನೆಗೆ ಪೊಲೀಸರು ಮೌನೇಶ್ ಬಳಿಯಲ್ಲಿದ್ದ 750 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!