Wednesday, July 6, 2022

Latest Posts

“ಪ್ರಧಾನಿ ಹೇಳಿದ ಅಚ್ಚೇ ದಿನ್ ಜನರನ್ನು ಹಸಿವೆಯಿಂದ ಬಳಲುವಂತೆ ಮಾಡಿದೆ”

ಹೊಸದಿಗಂತ ವರದಿ, ಹುಬ್ಬಳ್ಳಿ:

ದೇಶವನ್ನು ಉದ್ಧಾರ ಮಾಡತ್ತೇವೆ, ಸ್ವರ್ಗ ಮಾಡತ್ತೇವೆ. ಅಚ್ಚೇ ದಿನ್ ಮಾಡತ್ತೇವೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಸದ್ಯ ಜನರನ್ನು ಹಸಿವೆಯಿಂದ ಬಳಲುವಂತೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಆರೋಪಿಸಿದ್ದಾರೆ.

ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101 ಕ್ಕೆ ಸ್ಥಾನಕ್ಕೆ ಬಂದಿದೆ ಎಂದ ಅವರು, ಅನ್ನಭಾಗ್ಯ ಯೋಜನೆ ಸೋಮಾರಿಗಳನ್ನು ಮಾಡ್ತಿದೆ ಎನ್ನೋ ಹೆಚ್ ಡಿಕೆ ಆರೋಪವಾಗಿ ಮಾತನಾಡಿ ಹೊಟ್ಟೆ ತುಂಬಿದವರು ಹಾಗೇ ಹೇಳ್ತಾರೆ ಹಸಿವು ಯಾರು ಅನುಭವಿಸಿದ್ದಾರೆ. ಅವರು ಯಾರು ಈ ರೀತಿ ಹೇಳಲ್ಲ. ಅವರು ಹೇಳಿದ್ದೆಲ್ಲಾ ವೇದ ವ್ಯಾಕ್ಯವಲ್ಲ. ಬಡವರು ಆ ಬಗ್ಗೆ ಹೇಳಲಿ, ಅವರು ಅಕ್ಕಿ ಕೊಡಬೇಡಿ ಅಂತ ಹೇಳ್ತಾರಾ..? ಎಂದು ಪ್ರಶ್ನಿಸಿದರು.

ಬಿಎಸ್ ವೈ ಭೇಟಿ ಅಪ್ಪಟ ಸುಳ್ಳು: ನಾನು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ಅಪ್ಪಟ ಸುಳ್ಳು. ಯಾರಾದರು ಅದನ್ನು ಪ್ರೂವ್ ಮಾಡಿದರೇ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೆನೆ. ಬಿ.ಎಸ್. ವೈ ಅವರು, ಆರ್.ಎಸ್.ಎಸ್ ನಿಂದ ಬಂದವರು‌. ನಾವು ಅವರು ತದ್ವಿರುದ್ಧ, ಅವರನ್ನು ಭೇಟಿಯಾಗಿದ್ದು ಸುಳ್ಳು. ಅಧಿಕಾರದಲ್ಲಿರುವವರ ಮನೆ ಬಾಗಿಲಿಗೆ ನಾನು ಯಾವತ್ತು ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್,ಹೀಗಾಗಿ ನಾನು ಬಿಎಸ್ ವೈ ಭೇಟಿಯಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ಸಲೀಂ-ಉಗ್ರಪ್ಪ ಸಂಭಾಷೆ ಹಿಂದೆ ಸಿದ್ದು ಕೈವಾಡ ಎನ್ನುವ ಶೆಟ್ಟರ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ‌ನೀಡಿದ ಅವರು, ಹಾಗಿದ್ದರೆ ಯತ್ನಾಳ್, ವಿಶ್ವಾನಾಥ ಅವರಿಗೂ ನಾನೇ ಹೇಳಿದ್ನಾ..? ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕೂ ನಾನೇ ಕಾರಣನಾ..? ಇವರೆಲ್ಲಾ ಸಿಎಂ ಆದವರು ಹೀಗೇ ಮಾತನಾಡಿದರೇ ಹೇಗೆ. ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗಟ್ ಮಾಡಿದರೆ ಹೇಗೆ?. ಜಾತಿ ಸಮೀಕ್ಷೆ ಬಗ್ಗೆ ಕೂಡಾ ಜಗದೀಶ್ ಶೆಟ್ಟರ್ ಸುಳ್ಳು ಹೇಳ್ತಿದ್ದಾರೆ‌. ನನ್ನ ಕಾಲದಲ್ಲಿ ಸಮೀಕ್ಷೆ ಪೂರ್ಣ ಆಗಿದ್ದರೆ ನಾನೇ ಹೊರ ತರುತ್ತಿದ್ದೆ ಎಂದು ಅವರು ಹೇಳಿದರು.

ಸಿದ್ದು-ಡಿಕೆಶಿ ಬೇರೆ ಕಡೆ ಪ್ರಚಾರ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಶೆಟ್ಟರ್-ಬೊಮ್ಮಾಯಿ ಒಂದೇ ಕಡೆ ಹೋಗ್ತಾರಾ..?ಎಲ್ಲಾ ಕಡೆ ಕವರ್ ಮಾಡಬೇಕು ಅಂದರೆ ಬೇರೆ ಬೇರೆ ಕಡೆ ಪ್ರಚಾರ ಮಾಡಲೇಬೇಕು. ಹಾನಗಲ್, ಸಿಂಧಗಿ ನಮಗೆ ಒಳ್ಳೆ ವಾತಾವರಣವಿದೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss