ಆಯಸಿಡ್ ದಾಳಿ ಪ್ರಕರಣ: ಆರೋಪಿ ಪರ ವಕಾಲತ್ತು ವಹಿಸಲು ಮುಂದೆ ಬಾರದ ವಕೀಲರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು ವಾಸಿಗಳನ್ನು ಬೆಚ್ಚಿಬೀಳಿಸಿದ ಆಯಸಿಡ್ ದಾಳಿ ಪ್ರಕರಣದ ಆರೋಪಿ ಪರ ವಕಾಲತ್ತು ವಹಿಸಲು ವಕೀಲರು ಮುಂದಾಗದಿರುವುದು ಪ್ರಾಸಿಕ್ಯೂಷನ್ಗೆ ತಾಂತ್ರಿಕ ಅಡ್ಡಿಯಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗುರುವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಕಾನೂನಿನ ಪ್ರಕಾರ ಆರೋಪಿಯನ್ನು ಪ್ರತಿನಿಧಿಸದಿದ್ದರೆ ಮತ್ತು ಆತನಿಗೆ ವಕಾಲತ್ತು ವಹಿಸದಿದ್ದರೆ, ಪ್ರಕರಣವು ಮುಂದುವರಿಯುವುದಿಲ್ಲ. ಜೊತೆಗೆ ಜಾಮೀನು ಸಿಗುವುದಿಲ್ಲ. ಹೀಗಾಗಿ ಪ್ರಕರಣ ನನೆಗುದಿಗೆ ಬಿದ್ದಿದೆ ಎಂದರು.

‘ಆರೋಪಿಯನ್ನು ಒಬ್ಬ ವಕೀಲರು ಪ್ರತಿನಿಧಿಸಿದರೆ, ನ್ಯಾಯಾಲಯದ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತವೆ ಮತ್ತು ಆತನಿಗೆ ಶೀಘ್ರವೇ ಶಿಕ್ಷೆಯಾಗುತ್ತದೆ’ ಎಂದು ಪೊಲೀಸ್ ಆಯುಕ್ತರು ಹೇಳಿದರು.
2022ರ ಏಪ್ರಿಲ್ 28ರಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಯುವತಿ ಕೆಲಸ ಮಾಡುವ ಸ್ಥಳದ ಬಳಿ ಆಟೋರಿಕ್ಷಾದಲ್ಲಿ ಕಾದು ಕುಳಿತಿದ್ದ ಆರೋಪಿ ನಾಗೇಶ್, ಆಕೆಯ ಬೆನ್ನಟ್ಟಿ ಆಕೆಯ ಮೇಲೆ ಆಯಸಿಡ್ ಸುರಿದಿದ್ದರಿಂದ ಯುವತಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿವೆ.
ಆರೋಪಿ ಸಂತ್ರಸ್ತೆಯೊಂದಿಗೆ ಅದೇ ಶಾಲೆಯಲ್ಲಿ 10ನೇ ತರಗತಿ ಓದಿದ್ದ. ಆರೋಪಿಯ ಪ್ರೇಮವನ್ನು ತಿರಸ್ಕರಿಸಿದ ಬಳಿಕ ಪಾಗಲ್ ಪ್ರೇಮಿಯಾಗಿ ಮಾರ್ಪಟ್ಟು, ಆಕೆಯ ಮೇಲೆ ಆಯಸಿಡ್ ದಾಳಿ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 770 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!