ದೆಹಲಿಯಲ್ಲಿ ಆ್ಯಸಿಡ್ ತರಕಾರಿಯಂತೆ ಮಾರಾಟವಾಗುತ್ತಿದೆ: ದಾಳಿ ವಿರುದ್ಧ ಡಿಸಿಡಬ್ಲ್ಯು ಮುಖ್ಯಸ್ಥೆ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಶಾಲಾ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ ಇಡೀ ಜನತೆಯನ್ನೇ ಬೆಚ್ಚಿಬೀಳಿಸಿದ್ದು,ಈ ಘಟನೆ ಕುರಿತು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸ್ವಾತಿ ಮಲಿವಾಲ್, ಆ್ಯಸಿಡ್ ಮಾರಾಟದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ನ್ಯಾಯಾಲಯವನ್ನು ಒತ್ತಾಯಿಸುತ್ತೇವೆ. ಘಟನೆಯ ಕುರಿತು ನಾವು ನಗರದ ಪೊಲೀಸರಿಗೆ ನೋಟಿಸ್ ನೀಡಿದ್ದೇವೆ. ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ತಿಳಿಸಿದ್ದೇವೆ ಎಂದಿದ್ದಾರೆ.

ಮಾರುಕಟ್ಟೆಗಳಲ್ಲಿ ಆ್ಯಸಿಡ್ ತರಕಾರಿಯಂತೆ ಮಾರಾಟವಾಗುತ್ತಿದೆ . ಈ ಕುರಿತು ಹಿಂದೆಯೇ ಸೂಚನೆಗಳನ್ನು ನೀಡಿದೆ. ಹಲವಾರು ಶಿಫಾರಸುಗಳನ್ನು ಮಾಡಿದೆ. ಆದರೆ ಆ್ಯಸಿಡ್ ಮಾರಾಟ ಇನ್ನೂ ಕೂಡಾ ಮುಂದುವರಿದಿದೆ.ಯಾರು ಬೇಕಾದರೂ ಆ್ಯಸಿಡ್ ಖರೀದಿಸಿ ಇಂತಹ ಕೃತ್ಯಗಳನ್ನು ಮಾಡಬಹುದು. ಇಂತಹ ಸಂದರ್ಭದಲ್ಲಿ ಸರ್ಕಾರ ಏಕೆ ನಿದ್ರಿಸುತ್ತಿದೆ? ಹುಡುಗಿಯರ ಮೇಲೆ ಆ್ಯಸಿಡ್ ದಾಳಿಯಾದಾಗ ಅವರು ಬಾಹ್ಯವಾಗಿ ಮಾತ್ರವಲ್ಲದೇ ಆಂತರಿಕವಾಗಿಯೂ ಗಾಯಗೊಳ್ಳುತ್ತಾರೆ. ಅವರ ಜೀವನವೇ ನಾಶವಾಗಿ ಹೋಗುತ್ತದೆ ಎಂದು ಹೇಳಿದರು.

ಪಶ್ಚಿಮ ದೆಹಲಿಯ ಉತ್ತಮ್ ನಗರದ ಬಳಿಕ ಇಂದು ಬೆಳಗ್ಗೆ 7:30ರ ಹೊತ್ತಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 17 ವರ್ಷದ ಬಾಲಕಿ ಮೇಲೆ ಆ್ಯಸಿಡ್ ಎರಚಿದ್ದಾರೆ. ಘಟನೆಯಿಂದ ಬಾಲಕಿಯ ಮುಖ ಹಾಗೂ ಕಣ್ಣುಗಳಿಗೆ ಸುಟ್ಟ ಗಾಯಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!