ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಲಿವುಡ್ ನಟ ಅಕ್ಷಯ್ ಕುಮಾರ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ.
ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಅಕ್ಷಯ್ ಕುಮಾರ್ ಖುದ್ದಾಗಿ ಸ್ಟಂಟ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಂಟ್ ಶೂಟಿಂಗ್ ವೇಳೆ ಅಕ್ಷಯ್ ಕುಮಾರ್ ಕಣ್ಣಿಗೆ ಗಾಯವಾಗಿದೆ.
ತಕ್ಷಣವೇ ವೈದ್ಯರ ತಂಡ ಸ್ಥಳಕ್ಕೆ ದೌಡಾಯಿಸಿ ಚಿಕಿತ್ಸೆ ನೀಡಿದ್ದಾರೆ.
ಹೌಸ್‌ಫುಲ್ ಚಿತ್ರದ ಪ್ರೊಡಕ್ಷನ್ ಹೌಸ್ ನಾಡಿಯಾದ್‌ವಾಲ್ ಗ್ರ್ಯಾಂಡ್‌ಸನ್, ಈ ಕುರಿತು ಸ್ಪಷ್ಟನೆ ನೀಡಿದೆ. ಹೌಸ್‌ಫುಲ್ 5 ಶೂಟಿಂಗ್ ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಅಕ್ಷಯ್ ಕುಮಾರ್ ಗಾಯಗೊಂಡಿರುವ ಮಾಹಿತಿಯನ್ನು ಅಲ್ಲಗೆಳೆದಿಲ್ಲ.
ಬಾಲಿವುಡ್‌ನ ಬಹುನಿರೀಕ್ಷಿತ ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ನಡೆಯುತ್ತಿದೆ.ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್,ಜಾಕ್ವಲಿನ್ ಫರ್ನಾಂಡಿಸ್, ಶ್ರೇಯಸ್ ತಲಪಾಡೆ,ನರ್ಗಿಸ್ ಫಾಖ್ರಿ ಸೇರಿದಂತೆ ಹಲವು ಸ್ಟಾರ್ಸ್ಟ್ ಈ ಚಿತ್ರದಲ್ಲಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದೆ. ಇದೀಗ ಮುಂಬೈನಲ್ಲಿ ಅಂತಿಮ ಹಂತದ ಶೂಟಿಂಗ್‌ನಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಅಕ್ಷಯ್ ಕುಮಾರ್ ಅದೆಂತಾ ಅಪಾಯಕಾರಿ ಸ್ಟಂಟ್ ಇದ್ದರೂ ತಾವೇ ಖುದ್ದಾಗಿ ಮಾಡುತ್ತಾರೆ. ಇದೇ ರೀತಿ ಸ್ಟಂಟ್ ಶೂಟಿಂಗ್ ಮಾಡುವಾಗ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.