ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆನ್ನುನೋವಿನ ಚಿಕಿತ್ಸೆಗಾಗಿ ನಟ ದರ್ಶನ್ ಶುಕ್ರವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ವೈದ್ಯ ಡಾ. ನವೀನ್ ಅಪ್ಪಾಜಿ ಗೌಡ ಮಾತನಾಡಿ, ಇಂದು ಮಧ್ಯಾಹ್ನ 3:30 ಕ್ಕೆ ದರ್ಶನ್ ಅಡ್ಮಿಟ್ ಆದರು. ದರ್ಶನ್ ಕಾಲಲ್ಲಿ ವೀಕ್ನೆಸ್ ಇದೆ. ಎಡಗಡೆಯ ಕಾಲು ನೋವಿದೆ. ಎಂಆರ್‌ಐ, ಸ್ಕ್ಯಾನಿಂಗ್, ಎಕ್ಸ್ ರೇ ಮಾಡಬೇಕಾಗುತ್ತೆ. ಎಡಗಡೆಯ ಕಾಲು ತುಂಬಾ ನೋವಿದೆ. ಬೆನ್ನುನೋವಿಗೆ ಸಂಬಂಧಿಸದಂತೆ ಪರೀಕ್ಷೆ ಮಾಡಬೇಕಾಗುತ್ತೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ತಿಳಿಸಿದರು.
ಎಡಗಾಲು ಸ್ಪರ್ಶತೆ ಸ್ವಲ್ಪ ಕಡಿಮೆ ಆಗಿದೆ. ಎಕ್ಸಾಮಿನೇಷನ್ ಮುಗಿದ ಬಳಿಕ ಅಪರೇಷನ್ ಅಥವಾ ಫಿಸಿಯೋನಾ? ಅಥವಾ ಬೇರೆ ರೀತಿಯ ಚಿಕಿತ್ಸೆನಾ ಅಂತ ತಿಳಿಯಲಿದೆ. ಸದ್ಯಕ್ಕೆ ನೋವು ನಿವಾರಕ ನೀಡಲಾಗಿದೆ. ಎಕ್ಸಾಮಿನೇಷನ್ ರಿಪೋರ್ಟ್ ಬಳಿಕ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.