Tuesday, August 16, 2022

Latest Posts

ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ: ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಟ ದರ್ಶನ್ ಅವರನ್ನು ಭೇಟಿ ಮಾಡಿ ತಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ ಮಹಿಳೆ, ನಿಮ್ಮ ಹೆಸರಿನಲ್ಲಿ 25 ಕೋಟಿ ಲೋನ್ ಪಡೆಯೋದಕ್ಕೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆ ಬಗ್ಗೆ ಮಾಹಿತಿ ಪಡೆಯೋದಕ್ಕೆ ಬಂದಿರೋದಾಗಿ ತಿಳಿಸಿದ್ದರು. ಆ ಬಗ್ಗೆ ದರ್ಶನ್ ಸ್ನೇಹಿತರನ್ನು ವಿಚಾರಿಸಿದಾಗ ಯಾರೂ ಲೋನ್ ಗಾಗಿ ಅರ್ಜಿ ಸಲ್ಲಿಸಿರೋ ಬಗ್ಗೆ ಖಚಿತಗೊಂಡಿರಲಿಲ್ಲ. ಆಕೆ ತೆರಳಿದ ನಂತ್ರ ಅನುಮಾನಗೊಂಡ ನಟ ದರ್ಶನ್ ಸ್ನೇಹಿತರು ಪೊಲೀಸರಿಗೆ ಬ್ಯಾಂಕ್ ಮ್ಯಾನೇಜರ್ ಬಗ್ಗೆ ದೂರು ನೀಡಿದ್ದರಿಂದಾಗಿ, ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಅನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಹೀಗೆ ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಹೇಳಿಕೊಂಡು ಬಂದಿದ್ದಂತ ಮಹಿಳೆ ಬಗ್ಗೆ ಅನುಮಾನಗೊಂಡ ದರ್ಶನ್ ಸ್ನೇಹಿತರು ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಫೀಲ್ಡ್ ಗೆ ಇಳಿದ ಪೊಲೀಸರು ನಟ ದರ್ಶನ್ ಭೇಟಿಯಾಗಿದ್ದ ಮಹಿಳೆಯನ್ನು ಬಂಧಿಸಿ ವಿಚಾರಿಸಿದಾಗ, ಆಕೆ ನಕಲಿ ಮ್ಯಾನೇಜರ್ ಎಂಬುದಾಗಿ ತಿಳಿದು ಬಂದಿದೆ.
ಇದೀಗ ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಂಧಿತ ಮಹಿಳೆಯೂ ತಾವು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹೇಳಿದ್ದರಿಂದಾಗಿ ಹೀಗೆ ಮಾಡಿದ್ದಾಗಿ ಹೇಳಿದ್ದಾರೆ. ಇದರಿಂದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರನ್ನು ಕರೆಸಿರುವಂತ ಹೆಬ್ಬಾಳ ಠಾಣೆ ಪೊಲೀಸರು, ವಿಚಾರಣೆ ನಡೆಸೋದಕ್ಕೆ ಮುಂದಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss