ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಪ್ರಕರಣದಲ್ಲಿ ಸ್ವಲ್ಪ ರಿಲೀಫ್ ಪಡೆದಿರುವ ನಟ ದರ್ಶನ್ ಸಿನಿಮಾ ಶೂಟಿಂಗ್ ನಲ್ಲಿ ಮತ್ತೆ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ನಟ ದರ್ಶನ್ ಅವರು ಪತ್ನಿ, ಮಗನ ಜೊತೆ ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಪುರಾಣ ಪ್ರಸಿದ್ಧ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನ ಇದ್ದು, . ಇಲ್ಲಿಗೆ ಹಲವು ರಾಜಕಾರಣಿಗಳು ಶತ್ರು ಸಂಹಾರ ಪೂಜೆ ಮಾಡಿಸಲು ತೆರಳುತ್ತಾರೆ. ಈ ದೇವಾಲಯಕ್ಕೆ ನಟ ದರ್ಶನ್ ಕುಟುಂಬ ಸಮೇತ ತೆರಳಿದ್ದು, ಶತ್ರು ಸಂಹಾರ ಪೂಜೆ ಮಾಡಿಸಿ ದೇವರ ದರುಶನ ಪಡೆದಿದ್ದಾರೆ.
ಶತ್ರು ಸಂಹಾರ ಪೂಜೆ?
ಕೇರಳದ ಈ ಪ್ರಸಿದ್ಧ ದೇವಸ್ಥಾನದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಕಾಣಿಸಿಕೊಂಡಿರೋದು ಅಚ್ಚರಿಗೆ ಕಾರಣವಾಗಿದೆ. ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಈ ದೇವಸ್ಥಾನಲ್ಲಿ ದರ್ಶನ್ ಕುಟುಂಬ ಕಾಣಿಸಿಕೊಂಡಿದ್ದು ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಜೈಲಿನಲ್ಲಿದ್ದಾಗ, ಜಾಮೀನಿನ ಮೇಲೆ ಹೊರಗಡೆ ಬಂದ ಮೇಲೆ ಹಲವು ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನದಲ್ಲಿ ಪತ್ನಿ ವಿಜಯಲಕ್ಷ್ಮಿ, ಮಗ ಹಾಗೂ ನಟ ಧನ್ವೀರ್ ಜೊತೆ ವಿಜಯಲಕ್ಷ್ಮಿ ಅವರು ಆಗಮಿಸಿದ್ದಾರೆ.