ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಮೊದಲ ಪತ್ನಿ ಹೆಲೆನಾ ಲ್ಯೂಕ್ ಯುಎಸ್ ನಲ್ಲಿ ನಿಧನರಾಗಿದ್ದಾರೆ.
ಅವರ ನಿಧನದ ಸುದ್ದಿಯನ್ನು ಖ್ಯಾತ ನೃತ್ಯಗಾರ್ತಿ ಮತ್ತು ನಟಿ ಕಲ್ಪನಾ ಅಯ್ಯರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹೆಲೆನಾ ನವೆಂಬರ್ 3 ರಂದು ಕೊನೆಯುಸಿರೆಳೆದರು.
ಲೆನಾ ಅವರು 1985ರಲ್ಲಿ ತೆರೆಕಂಡ ಮರ್ದ್ ಸಿನಿಮಾದಲ್ಲಿನ ತಮ್ಮ ನಟನೆಯಿಂದ ಜನಮನ್ನಣೆ ಗಳಿಸಿದ್ದರು. ಈ ಸಿನಿಮಾದಲ್ಲಿ ಅವರು ಅಮಿತಾಭ್ ಜೊತೆಯಾಗಿ ನಟಿಸಿದ್ದರು. ಹೆಲೆನಾ ಅಮಿತಾಬ್ ಬಚ್ಚನ್ ಅವರ ಮರ್ದ್ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ದೀರ್ಘಕಾಲದಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು ಮತ್ತು ಡೆಲ್ಟಾ ಏರ್ ಲೈನ್ಸ್ ನಲ್ಲಿಯೂ ಕೆಲಸ ಮಾಡುತ್ತಿದ್ದರು.
ಭಾನುವಾರ ಸಾಯುವುದಕ್ಕೂ ಸ್ವಲ್ಪ ಸಮಯದ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹೆಲೆನಾ ಏನು ಒಂತರ ವಿಚಿತ್ರ ಅನುಭವವಾಗ್ತಿದೆ. ಮಿಶ್ರ ಭಾವನೆಗಳು ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಬರೆದುಕೊಂಡಿದ್ದರು.