Sunday, April 18, 2021

Latest Posts

ಕೋವಿಡ್ ಲಸಿಕೆ ಪಡೆದಿದ್ದ ನಟಿ, ರಾಜಕಾರಣಿ ನಗ್ಮಾಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನಟ,ರಾಜಕಾರಣಿ ನಗ್ಮಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ನಗ್ಮಾ ಅವರೇ ಟ್ವೀಟ್ ಮಾಡಿದ್ದು, ನಾನು ಈಗಾಗಲೇ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ಆದರೂ ಸೋಂಕು ಕಾಣಿಸಿದೆ. ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಆರಾಮಾಗಿ ಇರಬೇಡಿ. ಈಗಲೂ ಜಾಗರೂಕರಾಗಿರುವುದು ಮುಖ್ಯ ಎಂದು ಹೇಳಿದ್ದಾರೆ.
ಲಸಿಕೆ ತೆಗೆದುಕೊಂಡ ಮೇಲೂ ನನಗೆ ಪಾಸಿಟಿವ್ ಬಂದಿದೆ. ಹೋಂ ಕ್ವಾರೆಂಟೀನ್ ಆಗಿದ್ದೇನೆ. ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ. ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಎಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss